ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಪ್ರವಾಸ

district koppal central minister nirmala seetaramna visit
Published on

ಕೊಪ್ಪಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನಾಳೆಯಿಂದ (ಅ.15) ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇಂದು (ಅ.14) ದೆಹಲಿಯಿಂದ ಧಾರವಾಡಕ್ಕೆ ಆಗಮಿಸಲಿದ್ದು, ರಾತ್ರಿ ಹಂಪಿ ಜಂಗಲ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡುವರು. ಅ.15ರ ಬೆಳಗ್ಗೆ ಹಂಪಿ ವಿರೂಪಾಕ್ಷೇಶ್ವರ ದರ್ಶನ ಪಡೆದು ಬೆಳಗ್ಗೆ 10.30ಕ್ಕೆ ಕೊಪ್ಪಳ ತಾಲೂಕಿನ ಮೆತಗಲ್​ಗೆ ಆಗಮಿಸುವರು. ರೈತರ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಬೆಳಗ್ಗೆ 11.45 ಗಂಟೆಗೆ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮಕ್ಕೆ ತೆರಳಿ ಅಕ್ಕಿ ಸಂಸ್ಕರಣ ಟಕ ವೀಸುವರು. ಮಧ್ಯಾಹ್ನ 3ಗಂಟೆಯಿಂದ ಹೊಸಪೇಟೆಯ ಮಲ್ಲಿಗೆ ಹೋಟೆಲ್​ನಲ್ಲಿ ಪಿಎಂ ಇಂರ್ಟನ್​ಶಿಪ್​ ಯೋಜನೆ ಲಾನುಭವಿಗಳೊಂದಿಗೆ ಸಂವಾದ ನಡೆಸುವರು.

ಅ.16ರಂದು ಬೆಳಗ್ಗೆ 11 ಗಂಟೆಗೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾದಲ್ಲಿನ ರೈತರ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಮಧ್ಯಾಹ್ನ 1 ಗಂಟೆಗೆ ಸಿಂಧನೂರಿನಿಂದ ಹೊರಟು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ ನೀಡುವರು. ಅಲ್ಲಿಂದ ಕೊಂಚಗೇರಿ ಗ್ರಾಪಂ ಲೈಬ್ರರಿ ನೋಡಿಕೊಂಡು ಮಧ್ಯಾಹ್ನ 3 ಗಂಟೆಗೆ ರೈತರ ತರಬೇತಿ ಕೇಂದ್ರ ಉದ್ಘಾಟಿಸುವರು. ನಂತರ ಬಳ್ಳಾರಿ ಗ್ರಾಮೀಣ ಬ್ಯಾಂಕ್​ ಕೇಂದ್ರ ಕಚೇರಿಗೆ ಆಗಮಿಸಿ ಪರಿಶೀಲಿಸುವರು. ನಂತರ ಸರ್ಕಾರಿ ಅತಿಥಿ ಗೃಹದಲ್ಲಿ ತಂಗುವರು.

ಅ.17ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾಸಾಪುರ ಗ್ರಾಮದಲ್ಲಿನ ರೈತರ ತರಬೇತಿ ಕೇಂದ್ರ ಉದ್ಘಾಟಿಸುವರು. ಕಾರ್ಯಕ್ರಮ ಬಳಿಕ ಬೆಂಗಳೂರು ಮಾರ್ಗವಾಗಿ ದೆಹಲಿಗೆ ತೆರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net