ಕೊಪ್ಪಳ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅಂಬೇಡ್ಕರ್ ಬಗ್ಗೆ ಆಡಿದ ಅಪಮಾನಕರ ಮಾತುಗಳನ್ನು ಖಂಡಿಸಿ ಜ.6ರಂದು ಕೊಪ್ಪಳ ಬಂದ್ಗೆ ಕರೆ ನೀಡಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.
ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ. ಎಲ್ಲ ವರ್ಗದ ಜನರಿಗೆ ನ್ಯಾಯ ನೀಡಿದ್ದಾರೆ. ಎಲ್ಲ ವಿಮರ್ಶೆ, ಚರ್ಚೆಗಳ ಮೂಲಕ ಸಂವಿಧಾನ ರಚಿಸಿದ್ದಾರೆ. ಅಂಥ ಮೇಧಾವಿ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಆಡಿದ ಮಾತು ಸರಿಯಲ್ಲ. ಶೋಷಿತರಿಗೆ ಅಂಬೇಡ್ಕರ್ ದೇವರು. ಶೋಷಣೆ ಅನುಭವಿಸಿದವರಿಗೆ ಗೊತ್ತು. ದೇಶ ರಕ್ಷಿಸಬೇಕಾದ ಮಂತ್ರಿಯೊಬ್ಬರು ಹೀಗೆ ಮಾತನಾಡಿದ್ದು ಅಕ್ಷಮ್ಯ. ಮನುಸ್ಮ$ತಿ ಸುಡುವ ಬದಲು, ಅದನ್ನು ನಾವೆಲ್ಲ ಓದಬೇಕು. ಇದರಿಂದ ನಮ್ಮನ್ನ ಹೇಗೆ ತುಳಿದರು ಎಂಬುದನ್ನು ಅರ್ಥ ಆಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೈತಿಕತೆ ಇದ್ದರೆ ಅಮಿತ್ ಷಾ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇಲ್ಲ. ಸಂವಿಧಾನ ಸಂರಕ್ಷಣಾ ಸಮಿತಿಯಿಂದ ವಿವಿಧ ಪ್ರಗತಿಪರ ಸಂಘಟನೆಗಳು, ಅಹಿಂದ ಮತ್ತು ಅಲ್ಪ ಸಂಕ್ಯಾತ ಸಂಘಟನೆಗಳ ಸಹಯೋಗದಲ್ಲಿ ಬಂದ್ಗೆ ಕರೆ ನೀಡಿದ್ದೇವೆ. ಅಂದು ನಗರದಲ್ಲಿ ಬೃಹತ್ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಷಾ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆಂದು ವಿವರಿಸಿದರು.
ಸಂಚಾಲಕರಾದ ಹನುಮೇಶ ಕಡೆಮನಿ, ಟಿ.ರತ್ನಾಕರ, ಈಶಪ್ಪ ಹರಿಜನ, ಸಲೀಂ ಖಾದ್ರಿ ಇತರರಿದ್ದರು.