ಜಾತಿ ಗಣತಿಗೆ ಸರ್ವರ್​ ಸಮಸ್ಯೆ, ಸಂಕಷ್ಟದಲ್ಲಿ ಗಣತಿದಾರರು

district koppal cast survey app issue
Published on

ಕೊಪ್ಪಳ : ಯಲಬುರ್ಗಾ ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ವ್ಯಾಪ್ತಿಯಲ್ಲಿ ಗಣತಿ ಕಾರ್ಯಕ್ಕೆ ಸರ್ವರ್​ ಸಮಸ್ಯೆ ಉಂಟಾಗುತ್ತಿದೆ. ಆನ್​ ಲೈನ್​ ವ್ಯವಸ್ಥೆ ಕೈ ಕೊಟ್ಟ ಪರಿಣಾಮ ಸಾರ್ವಜನಿಕರು ಮತ್ತು ಗಣತಿ ದಾರರು ಸಂಕಷ್ಟ ಅನುಭವಿಸಿದರು.

ಆಧಾರ್​ಕಾರ್ಡ್​, ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿ ನೀಡಿ ಮಾಹಿತಿ ಒದಗಿಸಿದರೂ ಆನ್​ ಲೈನ್​ ಸಮಸ್ಯೆಯಿಂದ ಅದು ಅಪ್ಲೋಡ್​ ಆಗದ ಕಾರಣ ಮತ್ತೆ ಮೊದಲಿನಿಂದ ಮಾಹಿತಿ ನೀಡಲು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಸರ್ವರ್​ ಸಮಸ್ಯೆ ಯಿಂದಾಗಿ ಸಮೀಕ್ಷೆ ಮಾಡಲು ತೊಂದರೆಯಾಗುತ್ತಿದೆ ಆಧಾರ್​ ಒಟಿಪಿ ತಕ್ಷಣ ಬರುತ್ತಿಲ್ಲ ಕೊನೆಗೆ ದಾಖಲೆ ಅಪ್ಲೋಡ್​ ಆಗುತ್ತಿಲ್ಲ ಎಂದು ಸಮೀಕ್ಷೆದಾ ರರು ಹೇಳಿದರು.

ಬೆಳಗ್ಗೆ ಜಾತಿಗಣತಿ ಮಾಡುವುದಕ್ಕೆ ಮನೆಬಾಗಿಲಿಗೆ ಬಂದಾಗ ಆ್ಯಪ್​ ಒಪನ್​ ಆಗದೆ ಸಮಸ್ಯೆಯಾಗಿದೆ. ಕೆಲವು ಕಡೆ ಒಪನ್​ ಆಗಿ ಗಣಿತೀಯ ಪ್ರಶ್ನೆಗಳಿಗೆ ಉತ್ತರಿಸಿ ಇನ್ನೇನ್​ ಅಪ್ಲೋಡ್​ ಮಾಡಬೇಕು ಅಫ್ಟಿರಲ್ಲಿ ಸರ್ವಸಮಸ್ಯೆಯಿಂದ ಅಪ್ಲೋಡ್​ ಆಗದೆ ಮತ್ತೆ ಮೊದಲಿನಿಂದ ಆರಂಭಮಾಡಬೇಕು. ಆಧಾರ್​ಓಟಿಪಿ ಬೇಗ ಸಿಗುವುದಿಲ್ಲ ಕೆಲವು ಕಡೆ ಸಾರ್ವಜನಿಕರು ನೀವು ಏನ್​ ಗಣತಿ ಮಾಡುತ್ತೀರಿ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಕೇಳುತ್ತೀರಿ ಮೊದಲು ಮೊಬೈಲ್​ ಆ್ಯಪ್​ ಸರಿ ಮಾಡಿಸಿಕೊಂಡು ಬನ್ನಿ ಸುಮೆ ನಮ್ಮ ಸಮಯ ಯಾಕೆ ವ್ಯರ್ಥ ಮಾಡುತ್ತಿರಿ ಅಂತ ಕೇಳುತ್ತಾರೆ ಎಂದು ಸಮೀಕ್ಷೆಗೆ ಬಂದ ಶಿಕ್ಷಕ ನಾಗರಾಜ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net