

ಕೊಪ್ಪಳ: ನಗರದ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಕಾರ್ಮಿಕರ ವರ್ಗದ ಮಹಾನಾಯಕ, ವೈಜ್ಞಾನಿಕ ಸಮಾಜವಾದದ ಪಿತಾಮಹ ಕಾರ್ಲ್ ಮಾರ್ಕ್ಸ್ ಜನ್ಮ ದಿನ ಆಚರಿಸಲಾಯಿತು.
ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿಶರಣುಗಡ್ಡಿ ಮಾತನಾಡಿ,ಕಾರ್ಲ್ ಮಾರ್ಕ್ಸ್ ಕತ್ತಲೆಯಲ್ಲಿ ಸಿಲುಕಿದ್ದ ಹತಭಾಗ್ಯರ ಬದುಕಿಗೆ ಬೆಳಕು ನೀಡಿದ ಮಹಾನ್ ಪುರುಷ. ಶ್ರೀಮಂತರು ಶೋಷಿತ ಜನರ ರಕ್ತವನ್ನು ಜಿಗಣೆಯಂತೆ ಹಿರುತ್ತಿದ್ದರು. ಜನರ ಕೈಗೆ ಮಾರ್ಕ್ಸ್ ವಾದ ಎಂಬ ಅಸ್ತ್ರ ನೀಡಿದರು. ಮಾನವನು ಹುಟ್ಟಿನಿಂದಲೇ ಸ್ವತಂತ್ರ. ಆದರೆ ಎಲ್ಲ ಕಡೆಯೂ ಸಂಕೋಲೆಗಳಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ರೂಸೋ ಹೇಳಿದ. ಆದರೆ, ಜಗತ್ತಿನ ಕಾರ್ಮಿಕರಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಗೆಲ್ಲಲು ಇಡೀ ಜಗತ್ತೆ ಇದೆ' ಎಂಬುದನ್ನು ಮಾರ್ಕ್ಸ್ ತಮ್ಮ ಕ್ರಾಂತಿಕಾರಿ ಸಂಗಾತಿ ಮಹಾನ್ಎಂಗೆಲ್ಸ್ ಅವರ ಜೊತೆಗೂಡಿ ತೋರಿಸಿಕೊಟ್ಟರು ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಶರಣು, ಶರಣಬಸವ ಪಾಟೀಲ್, ಆರ್.ವಿ.ಕಾಮನೂರ್, ಗಂಗರಾಜ ಅಳ್ಳಳ್ಳಿ, ಮಂಜುಳಾ ಮಜ್ಜಿಗೆ, ಶಾರದಾ ಗಡ್ಡಿ ಇದ್ದರು.