ಕಿನ್ನಾಳದಲ್ಲಿ ಬೆಳಕಿನ ನಡಿಗೆ ಕಾರ್ಯಕ್ರಮ

candle light programme in Koppal sveep activity by district administraion
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮೆಣದ ಬತ್ತಿ ಬೆಳಗಿ ಮತದಾನ ಜಾಗೃತಿ ಮೂಡಿಸಲಾಯಿತು.
Published on

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಮತದಾನ ಜಾಗೃತಿ ಅಂಗವಾಗಿ ಭಾನುವಾರ ರಾತ್ರಿ ಕ್ಯಾಂಡಲ್​ ಲೈಟ್​ ಕಾರ್ಯಕ್ರಮ ಆಯೋಜಿಸಲಾಯಿತು. ಗ್ರಾಮದ ಬಸವೇಶ್ವರ ವೃತ್ತದಿಂದ ಆರಂಭವಾಗಿ ಗ್ರಾಪಂ ಹತ್ತಿರದ ಸ್ವಾಮಿ ವಿವೇಕಾನಂದ ವೃತ್ತವರೆಗೆ ಸಾಗಿತು.

ಗ್ರಾಮದ ದೇವಾಂಗ ಸಮುದಾಯ ಭವನದಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂಬ ಅಕ್ಷರಗಳನ್ನು ಬಿಡಿಸಿ ಅದರ ಸುತ್ತಲೂ ಮೆಣಬತ್ತಿಗಳಿಂದ ಬೆಳಕು ಜಗಮಗಿಸಿತು. ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿ ಡಾ.ಶಿವಕುಮಾರ ಮಾಲಿ ಪಾಟೀಲ್​ ಮತದಾನ ಜಾಗೃತಿ ಮೂಡಿಸಿದರು. ಮೆಹಬೂಬ್​ ಕಿಲ್ಲೇದಾರ ಚುನಾವಣಾ ಗೀತೆ ಹಾಡಿದರು. ಇಒ ದುಂಡಪ್ಪ ತುರಾದಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಪೂರ್ಣಿಮಾ ಏಳುಬಾವಿ, ರಮ್ಯಾ ಮತದಾನ ಜಾಗೃತಿ ಪೋಸ್ಟರ್​ ಬಿಡುಗಡೆಗೊಳಿಸಿದರು.

ಡಿಡಿಪಿಐ ಶೀಶೈಲ ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಸಿಡಿಪಿಒ ಜಯಶ್ರೀ, ಬಿಇಒ ಶಂಕ್ರಯ್ಯ, ತಾಲೂಕು ಸ್ವೀಪ್​ ನೋಡಲ್​ ಅಧಿಕಾರಿ ಹನುಮಂತಪ್ಪ, ಯೋಜನಾಧಿಕಾರಿ ರಾಜೇಸಾಬ, ಎಡಿ ಮಹೇಶ, ಪಿಡಿಒ ಪರಮೇಶ್ವರಯ್ಯ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net