ಬಸ್​ ಸಮಸ್ಯೆ ಪರಿಹರಿಸಿ

district koppal bus problem protest students
district koppal bus problem protest students
Published on

ಕೊಪ್ಪಳ: ಮುನಿರಾಬಾದ್​, ಹೊಸಪೇಟೆಗೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳ ಬಸ್​ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಎಐಡಿಎಸ್​ಒ ಸಂಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಎಡಿಸಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿದರು.

ಹುಲಗಿ ಕ್ರಾಸ್​ ಬಳಿ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಮುನಿರಾಬಾದ್​ ಗ್ರಾಮದೊಳಗೆ ಬಸ್​ಗಳು ಹೋಗುತ್ತಿಲ್ಲ. ಹೆದ್ದಾರಿ ಮೂಲಕ ನೇರವಾಗಿ ಹೊಸಪೇಟೆಗೆ ತೆರಳುತ್ತಿವೆ. ಇದರಿಂದ ಮುನಿರಾಬಾದ್​ಗೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ ಸ್ಪಂದಿಸಿಲ್ಲ. ಕಡ್ಡಾಯವಾಗಿ ಈ ಮಾರ್ಗದ ಬಸ್​ಗಳು ಮುನಿರಾಬಾದ್​ ಗ್ರಾಮದೊಳಗೆ ಸಂಚರಿಸುವಂತೆ ಸೂಚಿಸಿಲ್ಲವೆಂದು ದೂರಿದರು.

ಕೂಡಲೇ ಸಾರಿಗೆ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕು. ಬಸ್​ ಚಾಲಕರಿಗೆ ಲಿಖಿತ ಆದೇಶ ಮಾಡಬೇಕು. ಮುನಿರಾಬಾದ್​ ಗ್ರಾಮದೊಳಗೆ ಬಸ್​ ಸಂಚರಿಸಲು ತಾಕೀತು ಮಾಡಬೇಕು. ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಬೃಹತ್​ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಎಐಡಿಎಸ್​ಒ ಕಾರ್ಯಕರ್ತರಾದ ಗಂಗರಾಜ ಅಳ್ಳಳ್ಳಿ, ಸದಾಶಿವ, ಬಾನು, ಸಂಜನಾ, ವಿದ್ಯಾರ್ಥಿಗಳಾದ ರೇಣುಕಾ, ನಂದಿನಿ, ರುದ್ರೇಶ್​, ಆಶ್ರದ್​ ಅಲಿ, ಪ್ರವಿಣ್​, ಸಾಹಿಲ್​, ವಾಣಿಶ್ರೀ, ಅರ್ಚನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net