ನಿರ್ವಾಹಕನ ಮೇಲಿನ ಹಲ್ಲೆ ಖಂಡನೀಯ

Published on

ಕೊಪ್ಪಳ: ಬೆಳಗಾವಿ ಬಸ್​ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಮೇಲೆ ಹಲ್ಲೆ ನಡೆಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಕೆಎಸ್​ಆರ್​ಟಿಸಿ ಶ್ಟ್​ಾ ಆ್ಯಂಡ್​ ವರ್ಕರ್ಸ್​ ಯೂನಿಯನ್​ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪುರುಷನಿಗೆ ಉಚಿತ ಟಿಕೆಟ್​ ನೀಡುವಂತೆ ಗಲಾಟೆ ನಡೆಸಿ ನಿರ್ವಾಹಕನ ಮೇಲೆ ಪಂತಬಾಳೆಕುಂದ್ರಿಯಲ್ಲಿ ಹಲ್ಲೆ ನಡೆಸಲಾಗಿದೆ. ಜತೆಗೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಮರಾಠಿ ಮಾತನಾಡುವಂತೆ ಜಗಳ ತೆಗೆದಿದ್ದಾರೆ. ಇದನ್ನು ನಮ್ಮ ಸಂಟನೆ ತೀವ್ರವಾಗಿ ಖಂಡಿಸುತ್ತದೆ. ಇದು ಅಮಾನವೀಯ ಟನೆ ಎಂದರು.

ಸಂಸ್ಥೆ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾದೇವಪ್ಪ ಮೇಲೆ ದಾಖಲಿಸಿರುವ ಸುಳ್ಳು ಪೋಕ್ಸೋ ಪ್ರಕರಣ ರದ್ದು ಮಾಡಬೇಕು. ಸಾರಿಗೆ ನೌಕರರ ಸುರಕ್ಷತೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಪ್ರಕರಣ ದಾಖಲಿಸಿಕೊಂಡ ಪೊಲೀಸ್​ ಅಧಿಕಾರಿ ವಿರುದ್ಧವೂ ಕ್ರಮವಾಗಬೇಕು. ಎಲ್ಲ ಬಸ್​ನಿಲ್ದಾಣಗಳಲ್ಲಿ ಪೊಲೀಸ್​ ಚೌಕಿ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಯೂನಿಯನ್​ ವಿಭಾಗೀಯ ಅಧ್ಯಕ್ಷ ಬಸಯ್ಯ ಕಡ್ಲಿ, ಪ್ರಧಾನ ಕಾರ್ಯದರ್ಶಿ ಎ.ಬಿ.ದಿಂಡೂರ, ರಾಜ್ಯ ಜಂಟಿ ಕಾರ್ಯದರ್ಶಿ ಎ.ಜಿ.ಮಣ್ಣೂರ, ಎಸ್​.ಎ.ಗಾರ್​, ಮಲ್ಲಪ್ಪ ನೂಟಗಾರ, ಶಿವಕುಮಾರ್​ ಬೀಳಗಿ ಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net