

ಕೊಪ್ಪಳ: ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಕಲ್ಪಸುವಂತೆ ಒತ್ತಾಯಿಸಿ ಗಂಗಾವತಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ, ಅವು ಯಾವು ಸರಿಯಾಗಿ ನಮಗೆ ದೊರೆಯುತ್ತಿಲ್ಲ. ಅನೇಕ ಲೋಪಗಳು ಆಗುತ್ತಿದ್ದು ಅವುಗಳನ್ನು ಸರಿಪಡಿಸುವ ಕೆಲಸ ಆಗುತ್ತಿಲ್ಲ. ಕಳಪೆ ಕಿಟ್ ವಿತರಿಸಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ಸಿಗುತ್ತಿಲ್ಲ. ವೈದ್ಯಕಿಯ ವೆಚ್ಚ ಇನ್ನಿತರ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ. ನಿವೃತ್ತಿ ವೇತನ ಪ್ರತಿ ತಿಂಗಳು ನಿಗದಿತ ದಿನಾಂಕಕ್ಕೆ ತಲುಪುತ್ತಿಲ್ಲವೆಂದು ಆರೋಪಿಸಿದರು.
ಕಿಟ್ ನೀಡುವುದನ್ನು ನಿಲ್ಲಿಸಬೇಕು. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡಬೇಕು. ನಕಲಿ ಕಾರ್ಮಿಕರನ್ನು ಪತ್ತೆ ಮಾಡಿ. ಅಸಲಿ ಕಾರ್ಮಿಕರಿಗೆ ನವೀಕರಣ ಅರ್ಜಿ ವಿನಾಕಾರಣ ತಿರಸ್ಕರಿಸಬಾರದು. ಹೆರಿಗೆ ಸಹಾಯಧನ ನಗದು ರೂಪದಲ್ಲಿ ವಿತರಿಸಬೇಕು. ಹೊಸ ನೋಂದಣಿ ಸದಸ್ಯತ್ವ ಅವಧಿ ಮೂರು ವರ್ಷಕ್ಕೆ ಏರಿಸಬೇಕು. ತಾಲೂಕುವಾರು ಕಾರ್ಮಿಕ ಭವನ ನಿರ್ಮಿಸಬೇಕು. ತಾಲೂಕಿಗೊಂದು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸಿ. ನಗದು ರಹಿತ ಚಿಕಿತ್ಸೆ ನೀಡಿ. ಇಎಸ್ಐ, ಪಿಎ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. ವಿವಿಧ ಕಾರ್ಮಿಕರು ಇದ್ದರು.