ಎಮ್ಮೆ ಸಾವಿಗೆ ಕಾರಣವಾದ ಜೆಸ್ಕಾಂಗೆ ದಂಡ, ರೈತರ ದಶಕದ ಹೋರಾಟಕ್ಕೆ ಸಿಕ್ಕ ಜಯ

buffalo dies in gondabal village koppal district consumer forum gives direction to geskam officials
ಎಮ್ಮೆ ಕಳೆದುಕೊಂಡ ರೈತರು ಪರಿಹಾರ ಚೆಕ್​ ಪಡೆದುಕೊಂಡಿರುವುದು.
Published on

ಕೊಪ್ಪಳ: ವಿದ್ಯುತ್​ ಪ್ರವಹಿಸಿ ಎಮ್ಮೆ ಸಾವಿಗೆ ಕಾರಣವಾಗಿದ್ದ ಜೆಸ್ಕಾಂಗೆ ರಾಜ್ಯ ಗ್ರಾಹಕರ ಆಯೋಗ ದಂಡ ವಿಧಿಸಿದ್ದು, ಎಮ್ಮೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸೂಚಿಸಿದೆ.

2011ರಲ್ಲಿ ಗೊಂಡಬಾಳ ಗ್ರಾಮದಲ್ಲಿ ಹೊಲದಲ್ಲಿ ಹಾದು ಹೋಗಿದ್ದ 11ಕೆವಿ ವಿದ್ಯತ್​ ತಂತಿ ಗಾಳಿಗೆ ತುಂಡಾಗಿ ಬಿದ್ದಿದೆ. ವಿದ್ಯುತ್​ ಸಂಪರ್ಕ ಇದ್ದಿದ್ದರಿಂದ ಮೇಯಲು ತೆರಳಿದ್ದ ಐದು ಎಮ್ಮೆಗಳು ವಿದ್ಯುತ್​ ಶಾಕ್​ನಿಂದ ಸಾವಿಗೀಡಾಗಿದ್ದವು. ರೈತರಾದ ಹನುಮಪ್ಪ ಭೋಗಲಿ, ಗೋಣೆಪ್ಪ, ಶಿವಪ್ಪ, ಶಿವಪುತ್ರಪಪ್​, ಯಮನೂರ ಸಾಬ್​ ಎಂಬುವರು ಎಮ್ಮೆ ಕಳೆದುಕೊಂಡವರು. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದು, ಜೆಸ್ಕಾಂ ಅಧಿಕಾರಿಗಳ ರ್ನಿಲಕ್ಷ$್ಯತನದಿಂದ ಎಮ್ಮೆಗಳು ಸತ್ತಿದ್ದು, ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಮೊರೆ ಹೋಗಿದ್ದರು. ಆದರೆ, ಅರ್ಜಿದಾರರು ಜೆಸ್ಕಾಂ ಗ್ರಾಹಕರಲ್ಲವೆಂದು ಆಯೋಗ ತಿರಸ್ಕರಿಸಿತ್ತು. ಬಳಿಕ ಮೇಲ್ಮನವಿ ಸಲ್ಲಿಸಿದಾಗ ರಾಜ್ಯ ಆಯೋಗ ಮತ್ತೊಮ್ಮೆ ಅರ್ಜಿ ಪರಿಶೀಲನೆಗೆ ಸೂಚಿಸಿದೆ.

ಎರಡನೇ ಬಾರಿಗೆ 2014ರಲ್ಲಿ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಆಯೋಗ ಮತ್ತೊಮ್ಮೆ ಅರ್ಜಿ ತಿರಸ್ಕರಿಸಿದೆ. ಪುನ@ ರೈತರು ರಾಜ್ಯ ಆಯೋಗದ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಆಯೋಗ ರೈತರ ವಾದ ಪುರಸ್ಕರಿಸಿದೆ. ಜೆಸ್ಕಾಂ ಇಲಾಖೆ ರ್ನಿಲಕ್ಷ$್ಯತನ ಎಮ್ಮೆ ಸಾವಿಗೆ ಕಾರಣವಾಗಿದ್ದು, ಪರಿಹಾರ ನೀಡುವಂತೆ ಸೂಚಿಸಿದೆ.

ಐವರು ರೈತರು ಒಳಗೊಂಡು 2,50,200ರೂ. ಎಮ್ಮೆ ಮೊತ್ತ, ತಲಾ 20 ಸಾವಿರ ರೂ. ಪರಿಹಾರ ಹಾಗೂ ತಲಾ 10 ಸಾವಿರ ರೂ. ಪ್ರಕರಣದ ರ್ಖಚನ್ನು 45 ದಿನದಲ್ಲಿ ವಿತರಿಸುವಂತೆ ಆದೇಶಿಸಿದೆ. ಆದೇಶ ಮಾನ್ಯ ಮಾಡಿದ ಗುಲರ್ಬಗಾ ವಿದ್ಯುತ್​ ಸರಬರಾಜು ಕಂಪನಿ ರೈತರಿಗೆ ಪರಿಹಾರ ಚೆಕ್​ ವಿತರಿಸಿದೆ. ರೈತರ ಪರವಾಗಿ ವಕೀಲರಾದ ಐ.ವಿ.ಪತ್ತಾರ, ಎಂ.ವಿ.ಮುದಗಲ್​ ಪ್ರಕರಣ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net