ಕಾರ್ಖಾನೆ ವಿರುದ್ಧ ಪೇಂಟ್​ ಬಳಿವ ಅಭಿಯಾನ

district koppal bspl industries protest koppal bachavo andolana
Published on

ಕೊಪ್ಪಳ: ಬಿಎಸ್​ಪಿಎಸ್​, ಕಿಲೋರ್ಸ್ಕರ್​, ಕಲ್ಯಾಣಿ ಸೇರಿ ಹೊಸ ಕಾರ್ಖಾನೆಗಳ ಆರಂಭ ಮತ್ತು ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ನಗರದ ವಿವಿಧೆಡೆ ಕಾರ್ಖಾನೆ ವಿರುದ್ಧ ನಗರದ ವಿವಿಧೆಡೆ ಬಣ್ಣ ಹಚ್ಚುವ ಅಭಿಯಾನ ನಡೆಸಿದರು.

ನಗರದ ಕಿನ್ನಾಳ ರಸ್ತೆಯ ರೈಲ್ವೆ ಕೆಳ ಸೇತುವೆ ಗೋಡೆಗಳಿಗೆ ಬಿಳಿ ಬಣ್ಣ ಹಚ್ಚಲಾಯಿತು. ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಘೋಷಣೆ ಬರೆಯಲು ಸಿದ್ಧತೆ ಮಾಡಿಕೊಳ್ಳಲಾಯಿತು. ಅಭಿಯಾನಕ್ಕೆ ಕೊಪ್ಪಳ, ಭಾಗ್ಯನಗರ ಬಣ್ಣದ ವ್ಯಾಪಾರಿಗಳು ದೇಣಿಗೆ ರೂಪದಲ್ಲಿ ಬಣ್ಣ ನೀಡಿದ್ದಾರೆ. ಚಿತ್ರ ಕಲಾವಿದರಾದ ರಾಜು ತೇರದಾಳ, ಕೃಷ್ಣ ಚಿತ್ರಗಾರ ಘೋಷಣೆಗಳನ್ನು ಬರೆಯಲಿದ್ದಾರೆ. ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕರು ಬೆಂಬಲ ನೀಡಿದ್ದಾರೆ.

ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ.ಗೋನಾಳ, ಬಸವರಾಜ ಶೀಲವಂತರ, ಮಹಾಂತೇಶ್​ ಕೊತಬಾಳ, ಮಂಜುನಾಥ ಗೊಂಡಬಾಳ, ಶರಣು ಶೆಟ್ಟರ್​, ಎಸ್​.ಎ. ಗಫಾರ್​, ಜ್ಯೋತಿ ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಚನ್ನಬಸಪ್ಪ ಅಪ್ಪಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net