ಬಿಎಸ್​ಪಿಎಲ್​ನಿಂದ ಒಡೆದಾಳುವ ನೀತಿ ಅನುಕರಣೆ

Published on

ಕೊಪ್ಪಳ: ಬಿಎಸ್​ಪಿಎಲ್​ ಕಂಪನಿ ವಿರುದ್ಧ ಗವಿಶ್ರೀಗಳು ಸೇರಿ 120ಕ್ಕೂ ಹೆಚ್ಚು ಸಂಟನೆಗಳು ಪ್ರತಿಭಟನೆ ನಡೆಸಿವೆ. ಅದರಲ್ಲಿ ದಲಿತ ಸಂಟನೆಗಳೂ ಸೇರಿವೆ. ಆದರೆ, ಬಿಎಸ್​ಪಿಎಲ್​ ಕಂಪನಿಯವರು ಗಂಗಾವತಿ, ಕಾರಟಗಿ ಭಾಗದ ದಲಿತ ಮುಖಂಡರನ್ನು ಕರೆಸಿ ಕಾರ್ಖಾನೆ ಪರವಾಗಿ ಸುದ್ದಿಗೋಷ್ಠಿ ಮಾಡಿಸಿ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆಂದು ದಲಿತ ಮುಖಂಡ ಮಲ್ಲು ಪೂಜಾರ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಗಂಗಾವತಿ, ಕಾರಟಗಿ ಭಾಗದ ಜನರಿಗೆ ಕೊಪ್ಪಳದ ಜನರ ಪರಿಸ್ಥಿತಿ ಅರಿವಿಲ್ಲ. ಕಾರ್ಖಾನೆಯವರು ಅವರಿಗೆ ತಪು$್ಪ ಮಾಹಿತಿ ನೀಡಿ ಸುದ್ದಿಗೋಷ್ಠಿ ಮಾಡಿಸಿದ್ದಾರೆ. ಇವರು ಸುದ್ದಿಗೋಷ್ಠಿ ಮಾಡುವ ವಿಷಯ ಕಂಪನಿಯವರಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ ? ವಿಷಯ ತಿಳಿದ ಮೇಲೆ ನಾವು ಅವರೊಂದಿಗೆ ಮಾತನಾಡಿದ್ದೇವೆ. ಕೆಲವರು ಬೇರೆ ಆಮಿಷಗಳಿಗೆ ಹಾಗೆ ಮಾಡಿರಬಹುದು. ಉದ್ಯೋಗ, ಹಣಕ್ಕಿಂತ ನಮಗೆ ಆರೋಗ್ಯ ಮುಖ್ಯ, ಈ ಬಗ್ಗೆ ಅವರಿಗೆ ಅರಿವಿಲ್ಲ. ಎಲ್ಲ ದಲಿತಪರ ಸಂಟನೆಗಳು ಕಾರ್ಖಾನೆ ಬೇಡವೆಂಬ ಹೇಳಿಕೆಗೆ ಬದ್ಧರಿದ್ದೇವೆ. ಯಾರೂ ಸಮುದಾಯ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

ಯಲ್ಲಪ್ಪ ಹಳೇಮನಿ ಮಾತನಾಡಿ, ನಮ್ಮ ಸಂಟನೆಯ ಕೆಲವರು ಸಂಟನೆ ಲೆಟರ್​ ಹೆಡ್​ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವೈಯಕ್ತಿಕ ಹೇಳಿಕೆ ಇದ್ದರೆ ನೀಡಲಿ. ಅದಕ್ಕೆ ಸಂಟನೆ ಹೆಸರು ದುರ್ಬಳಕೆ ಮಾಡುವುದು ಬೇಡವೆಂದು ತಿಳಿಸಲಾಗಿದೆ. ಮುಂದುವರಿದಲ್ಲಿ ಅವರ ವಿರುದ್ಧ ಸಂಟನೆಯಿಂದ ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net