ವಿಜಯವಾಣಿ ವಿಶೇಷ ಕೊಪ್ಪಳ
ನಗರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಕಾರ್ಖಾನೆ ವಿಸ್ತರಣೆ ಮಾಡದಂತೆ ಆಗ್ರಹಿಸಿದ್ದ ಗವಿಶ್ರೀಗಳ ನೇತೃತ್ವದ ಹೋರಾಟಕ್ಕೆ ತೀವ್ರ ಹಿನ್ನೆಡೆಯಾಗಿದೆ. ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸದನದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಾಮಗಾರಿ ತಡೆದಿದ್ದೇವೆ. ಕಾರ್ಖಾನ ಆರಂಭವಾಗಲು ಡುವುದಿಲ್ಲ ಎಂದು ಸರ್ಕಾರ, ಸಚಿವ, ಶಾಸಕರು ಹೋರಾಟಗಾರರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು ಬಟಾ ಬಯಲಾಗಿದೆ.
ಕೊಪ್ಪಳದಲ್ಲಿ 28 ಐರನ್ ಆ್ಯಂಡ್ ಸ್ಪಾಂಜ್ ಕಂಪನಿಗಳಿದ್ದು 7,048 ಉದ್ಯೋಗಿಗಳಿದ್ದಾರೆಂದು ಸರ್ಕಾರವೇ ಅಧಿಕೃತ ಮಾಹಿತಿ ಒದಗಿಸಿದೆ. ಬಿಎಸ್ಪಿಎಲ್ ಕಾರ್ಖಾನೆ ವಿಸ್ತರಣೆಗೆ ಮುಂದಾಗಿದ್ದು, 3.5ಮೆಟ್ರಿಕ್ ಟನ್ ಸಾಮರ್ಥ್ಯದ ಇಂಟಿಗ್ರೇಟೆಡ್ ಸ್ಟೀಲ್ ಪ್ಲಾಂಟ್ ಹಾಗೂ 295 ಮೆಗಾ ವ್ಯಾಟ್ ವಿದ್ಯುತ್ ಸ್ಥಾವರ ಟಕಕ್ಕೆ 2021ರಲ್ಲೇ ಕೇಂದ್ರ ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆದಿದೆ. ಅದನ್ನು ಆಧರಿಸಿ ರಾಜ್ಯ ಸರ್ಕಾರ 2024ರ ಜುಲೈ 19ರಂದು ಅನುಮತಿ ನೀಡಿದೆ. ಇದರ ಒಟ್ಟು ಹೂಡಿಕೆ 17,979 ಕೋಟಿ ರೂ.
ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ನಡೆಸಿದ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆಯಲ್ಲೂ ಕಂಪನಿ 54 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ, 15 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದೊಡನೆ ಒಡಂಬಡಿಕೆ ಮಾಡಿಕೊಂಡಿದೆ. ನಗರಕ್ಕೆ ಹೊಂದಿಕೊಂಡು ಇಷ್ಟು ದೊಡ್ಡ ಕಾರ್ಖಾನೆ ಆರಂಭಿಸುವುದು ಬೇಡವೆಂದು ಗವಿಮಠ ಗವಿಸಿದ್ದೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಬೃಹತ್ ಹೋರಾಟ ನಡೆದಿದೆ. ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ಮುಂದುವರೆಸಿದೆ.
ದೊಡ್ಡ ಪ್ರಮಾಣದಲ್ಲಿ ಜನವಿರೋಧ ವ್ಯಕ್ತವಾಗುತ್ತಲೇ ಕೆಲಸ ನಿಲ್ಲಿಸುವುದಾಗಿ ಬಾಯಿ ಮಾತಿನಲ್ಲಿ ಸೂಚಿಸಿದ ಸರ್ಕಾರ ಹೋರಾಟ ತಣ್ಣಗಾಗಲಿ ಎಂದು ಜಾಣ ನಡೆ ಅನುಸರಿಸಿದೆ. ಕೊಪ್ಪಳಕ್ಕೆ ಬಂದು ಗವಿಶ್ರೀಗಳು, ಹೋರಾಟಗಾರರೊಂದಿಗೆ ಸಭೆ ನಡೆಸುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಪೂರಕವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಪ್ಪಳ ಜಿಲ್ಲಾಧಿಕಾರಿ ಮೂಲಕ ವರದಿ ಪಡೆಯವುದಾಗಿ ಯಾಮಾರಿಸಿದೆ. ಅಲ್ಲದೇ ಹೋರಾಟಗಾರರು&ಕಂಪನಿ ನಡುವೆ ತಿಕ್ಕಾಟಕ್ಕೆ ವೇದಿಕೆ ಕಲ್ಪಿಸಿಕೊಟ್ಟು ಪರಸ್ಪರ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಸಚಿವರು, ಶಾಸಕ, ಸಂಸದರೂ ಹೋರಾಟಗರರೊಂದಿಗೆ ನಾವಿದ್ದೇವೆ, ಕಾರ್ಖಾನೆ ಆಗಲು ಬಿಡುವುದಿಲ್ಲ ಎನ್ನುತ್ತಲೇ ಹೋರಾಟಗಾರರ ಮೂಗಿಗೆ ತುಪ್ಪ ಸವರಿದ್ದಾರೆ.
ಬಯಲಾದ ಮುಖವಾಡ
ಸಿಎಂ ಸಿದ್ದರಾಮಯ್ಯ ಹಾದಿಯಾಗಿ ಜನಪ್ರತಿನಿಧಿಗಳು ಸರ್ಕಾರ ಕೊಪ್ಪಳ ಜನರನ್ನು ಯಾಮಾರಿಸಿದೆ. ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಎದ್ದಿದ್ದ ಬಹುದೊಡ್ಡ ಜನಾಂದೋಲನವನ್ನು ವ್ಯವಸ್ಥಿತವಾಗಿ ಮೌನವಾಗಿಸಿದೆ. ಹೋರಾಟ ವಿಷಯದಲ್ಲಿ ಮಾಡುವುದಾಗಿ ಹೇಳಿದ ಯಾವೊಂದು ಕೆಲಸವನ್ನೂ ಮಾಡಿಲ್ಲ. ಬದಲಿಗೆ ಕಾರ್ಖಾನೆ ಆರಂಭಿಸುವುದನ್ನು ತಡೆಯಲು ಸಾಧ್ಯವಿಲ್ಲವೆಂದು ಂಟಾಘೋಷವಾಗಿ ಸಾರಿದೆ. ಈ ಮೂಲಕ ಹೋರಾಟದಲ್ಲಿ ಕಾರ್ಖಾನೆಗಳ ಕೈ ಮೇಲಾಗಿದ್ದು, ಜನರ ಪರವಾಗಿ ನಾವಿದ್ದೇವೆ ಎಂಬ ಜನಪ್ರತಿನಿಧಿಗಳು, ಸರ್ಕಾರದ ಮುಖಡವಾಡ ಕಳಚಿ ಬಯಲಾಗಿದೆ.
ಮೌನವಾದ ಹೋರಾಟ ?
ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಆರಂಭಿಸಿದ ಹೋರಾಟಕ್ಕೆ ಗವಿಶ್ರೀಗಳು ಬೆಂಬಲಿಸುತ್ತಲೇ ಬೃಹತ್ ಜನಾಂದೋಲನ ಸೃಷ್ಟಿಯಾಯಿತು. ಮತ್ತೊಂದೆಡೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯೂ ತನ್ನದೇ ಮಾದರಿ ಹೋರಾಟ ಮುಂದುವರೆಸಿದೆ. ನೂರಾರು ಸಂ&ಸಂಸ್ಥೆಗಳು ಹೋರಾಟ ಬೆಂಬಲಿಸಿ ಸುಮ್ಮನಾದವು. ಗವಿಶ್ರೀಗಳು ನಿತ್ಯ ಹೋರಾಟ ಬೇಡ. ಸರ್ಕಾರಕ್ಕೆ ನಮ್ಮ ಬೇಡಿಕೆ ಸಲ್ಲಿಸಿದ್ದೇವೆ. ಜನಪ್ರತಿನಿಧಿಗಳಿಗೂ ಜವಾಬ್ದಾರಿ ನೀಡಿದ್ದು, ಅವರ ಕೆಲಸ ಅವರು ಮಾಡಲಿ. ಭಕ್ತರು ನಿಮ್ಮ ಕೆಲಸ ನೀವು ಮಾಡಿ ಎಂಬ ಸಂದೇಶ ನೀಡಿ ಸುಮ್ಮನಾಗಿದ್ದಾರೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದ ಹೋರಾಟಗಾರರ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದ್ದು, ಸದ್ಯಕ್ಕೆ ಹೋರಾಟ ಮೌನಕ್ಕೆ ಜಾರಿದೆ.