ಮಾಲಿನ್ಯ ವಿರುದ್ಧ ಜಾಗೃತಿ ಶಿಬಿರ ಇಂದಿನಿಂದ

Published on

ಕೊಪ್ಪಳ: ಜಿಲ್ಲೆಯಲ್ಲಿ ಬಿಎಸ್​ಪಿಎಲ್​, ಅಣು ಸ್ಥಾವರ ಆರಂಭ ಖಂಡಿಸಿ ಹಾಗೂ ಈಗಿರುವ ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳ ಜಾಗೃತಿ ಶಿಬಿರ ಇಂದಿನಿಂದ ಎರಡು ದಿನಗಳ ಕಾಲ ತಾವರಗೇರಾದ ಬುದ್ಧವಿಹಾರದಲ್ಲಿ ನಡೆಯಲಿದೆ.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಶಿಬಿರ ನಡೆಯಲಿದೆ. ಕಾರ್ಖಾನೆಗಳಿಂದ ಬಾಧಿತ ಗ್ರಾಮಗಳಿಗೆ ವಾರದಿಂದ ಭೇಟಿ ನೀಡಿದ ಸಂಚಾಲಕರು ಶಿಬಿರಕ್ಕೆ ಜನರನ್ನು ಆಹ್ವಾನಿಸಿದ್ದಾರೆ. ಪರಿಸರ ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳ ಸಂಕ್ಷಿಪ್ತ ಮಾಹಿತಿ ಹಾಗೂ ಮುಂದಿನ ಸುದೀರ್ಘ ಹೋರಾಟ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. ಮಾ.23, 24ರಂದು ಎರಡು ದಿನ ಶಿಬಿರ ನಡೆಯಲಿದೆ. ಅನೇಕ ವಿಷಯ ತಜ್ಞರು, ಪರಿಸರವಾದಿಗಳು, ಚಿಂತಕರು, ಹೋರಾಟಗಾರರು, ಕಾರ್ಖಾನೆ, ಉದ್ಯೋಗ, ಅಭಿವೃದ್ಧಿ, ಕೃಷಿ, ಪರಿಸರ ಮಾಲಿನ್ಯ, ಜನಹೋರಾಟಗಳು ಇಂತಹ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

ಹೋರಾಟಗಾರರಾದ ಎಸ್​.ಆರ್​.ಹಿರೇಮಠ್​, ವಿ.ಎನ್​.ರಾಜಶೇಖರ್​, ಬಸವರಾಜ್​ ಸೂಳಿಭಾವಿ, ಕೃಷಿ ವಿಜ್ಞಾನಿ ರಾಜೇಂದ್ರ ಪೋತದಾರ್​, ಖ್ಯಾತ ಲೇಖಕ ಶಿವಸುಂದರ್​, ಕೊಪ್ಪಳ ಜಿಲ್ಲಾ ಬಚಾವೋ ಸಮಿತಿಯ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್​. ಪೂಜಾರ, ಕೆ.ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಟಿ. ರತ್ನಾಕರ ಅನೇಕರು ಮಾಹಿತಿ ಮಾರ್ಗದರ್ಶನ ಮಾಡುವರು. ಬಾಗವಹಿಸುವ ಶಿಬಿರಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾಲಕ ಮಂಜುನಾಥ ಗೊಂಡಬಾಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net