ಕಾಂಗ್ರೆಸ್​-ಬಿಜೆಪಿ ತಿರಸ್ಕರಿಸಿ

BSP leader M.Krishnappa press meet in koppal about LS polls
Published on

ಕೊಪ್ಪಳ: ರಾಜ್ಯ, ದೇಶದಲ್ಲಿ ಜನವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​, ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಿ ಬಿಎಸ್​ಪಿ ಬೆಂಬಲಿಸುವಂತೆ ಪಕ್ಷದ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕಳೆದ 70 ವರ್ಷದಲ್ಲಿ ಕಾಂಗ್ರೆಸ್​, ಬಿಜೆಪಿ ಆಡಳಿತ ಮಾಡಿವೆ. ಆದರೂ, ಕೊಪ್ಪಳ ಕ್ಷೇತ್ರದಲ್ಲಿ ಜನರಿಗೆ ಕುಡಿವ ನೀರು ಒದಗಿಸಲು ಇವರಿಂದ ಆಗಿಲ್ಲ. ಪಕ್ಕದಲ್ಲಿ ಜಲಾಶಯವಿದ್ದರೂ ಜನರು ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಆರೋಗ್ಯ ಸೇವೆ ಸುಧಾರಿಸಿಲ್ಲ. ಕೈಗಾರಿಕೆಗಳಿದ್ದರೂ ಯುವಕರಿಗೆ ಉದ್ಯೋಗ ಕೊಡಿಸಲಾಗುತ್ತಿಲ್ಲ. ಅಕ್ರಮ ಗಣಿಗಾರಿಕೆಗೆ ಸಂಸದ, ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ. ಜನರು ನೀಡಿದ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿದರು.

ಸಂಸದ ಪ್ರಜ್ವಲ್​ ಮತ್ತು ರೇವಣ್ಣ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇಷ್ಟು ದಿನಗಳಾದರೂ ಅವರನ್ನು ಬಂಧಿಸಿಲ್ಲ. ರಾಜ್ಯ ಸರ್ಕಾರ ಪರೋಕ್ಷವಾಗಿ ಆರೋಪಿಗಳಿಗೆ ಸಹಕಾರ ನೀಡುತ್ತಿದೆ. ಹೀಗಾಗಿ ಹಾಲಿ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆಗೆ ಅವಕಾಶ ಕಲ್ಪಿಸಬೇಕು. ಮಹಿಳೆಯರ ಮಾನ ಕಾಪಾಡಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಅಪರಾಧಿಗಳನ್ನು ಶಿಸಬೇಕು. ಅಭಿವೃದ್ಧಿಗಾಗಿ ಮತದಾರರು ಬಿಎಸ್​ಪಿ ಬೆಂಬಲಿಸಬೇಕು. ನಮ್ಮ ಅಭ್ಯರ್ಥಿ ಶಂಕರ ಸಿದ್ದಾಪುರ ಅವರಿಗೆ ಮತ ಹಾಕಿ ಗೆಲ್ಲಿಸಬೇಕು. ಜನರ ಆಶಯಕ್ಕೆ ತಕ್ಕಂತೆ ನಾವು ಆಡಳಿತ ನಡೆಸುತ್ತೇವೆ ಎಂದರು.

ಬಿಎಸ್ಪಿ ಅಭ್ಯರ್ಥಿ ಶಂಕರ ಸಿದ್ಧಾಪುರ, ರಾಜ್ಯ ಕಾರ್ಯದರ್ಶಿ ಶಿವಪುತ್ರಪ್ಪ ಗುಮಗೇರಾ, ವಕೀಲ ಮೈಲಾರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net