ಕೊಪ್ಪಳ: ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ 47 ಲಕ್ಷ ಇದ್ದರೂ ಸರ್ಕಾರದ ಲೆಕ್ಕದಲ್ಲಿ 17 ಲಕ್ಷ ಮಾತ್ರ ಇದ್ದೇವೆ. ಇದು ನಮ್ಮವರೇ ಮಾಡಿದ ತಪು$್ಪ. ಬರುವ ದಿನಗಳಲ್ಲಿ ಉಪಜಾತಿ, ಪಂಗಡಗಳ ಹೆಸರು ಬಳಸುವ ಬದಲು ಬ್ರಾಹ್ಮಣ ಎಂದು ಬರೆಸುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನ ಆಕಾಂ ಭಾನುಪ್ರಕಾಶ ಶರ್ಮಾ ಹೇಳಿದರು.
ನಗರದಲ್ಲಿ ಶುಕ್ರವಾರ ಮತಯಾಚನೆ ಮಾಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಂಟನೆ ವಿಸ್ತರಿಸಬೇಕಿದೆ. ಸಾಧಕ&ಬಾಧಕ ಪರಿಶೀಲಿಸಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲಾಗುವುದು. ಡಿಜಿಟಲ್ ವ್ಯವಸ್ಥೆ ಜಾರಿಗೆ ಯತ್ನಿಸಲಾಗುವುದು. ಬಡ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಾಸಾಶನ ವಿತರಣೆ ಸೇರಿ ಇತರ ಯೋಜನೆ ಹಾಕಿಕೊಳ್ಳಲಾಗಿದೆ. ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿಗೆ ಪಂಡಿತರಿಗೆ ಅವಕಾಶ ಸಿಕ್ಕಿದೆ. ಅಧಿಕಾರವಧಿ 5 ವರ್ಷ ಇರಲಿದೆ ಎಂದು ತಿಳಿಸಿದರು.
ಚುನಾವಣೆಗೆ ಏ.13ರಂದು ಮತದಾನ ಇರಲಿದ್ದು, ಭಾನುಪ್ರಕಾಶ ಅವರು ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 1,800 ಸದಸ್ಯತ್ವ ಇದೆ. 1,200 ಜನ ಮತದಾನಕ್ಕೆ ಅರ್ಹರಾಗಿದ್ದಾರೆ. ಚುನಾವಣೆಯಲ್ಲಿ ಶರ್ಮಾ ಅವರನ್ನು ಬೆಂಬಲಿಸಲಾಗುವುದೆಂದು ಜಿಲ್ಲಾ ಪದಾಧಿಕಾರಿಗಳು ತಿಳಿಸಿದರು.
ಮಹಾಸಭಾದ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ, ಜಿಲ್ಲಾ ಸಂಚಾಲಕ ಎಚ್.ಬಿ.ದೇಶಪಾಂಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಜೋಶಿ, ಪ್ರಮುಖರಾದ ಡಾ.ಕೆ.ಜಿ. ಕುಲಕರ್ಣಿ, ರಾಘವೇಂದ್ರ ನರಗುಂದ, ವೇಣುಗೋಪಾಲ್ ಜಹಗೀರದಾರ್, ಅನಿಲಕುಮಾರ ಕುಲಕರ್ಣಿ, ರಮೇಶ ಜಹಗೀರದಾರ, ಸುನಿಲ್ ಕುಮಾರ ದೇಸಾಯಿ, ಕೃಷ್ಣ ಪದಕಿ, ಸುರೇಶ ಮುಧೋಳ, ವಿಜಯ ಪದಕಿ, ವೀಣಾ ಜಹಗೀರದಾರ್, ಲತಾ ಮುಧೋಳ ಇತರರಿದ್ದರು.