ಬಾಲಕ ಅಪಹರಣ ಶಂಕೆ

district koppal boy arman kidnap case koppal
Published on

ಕೊಪ್ಪಳ: ನಗರದ ಮಿಟ್ಟಿಕೇರಿ ಓಣಿ ನಿವಾಸಿ ನಾಲ್ಕು ವರ್ಷದ ಮಹ್ಮದ್​ ಅಮಾರ್ನ್​ ತಂದೆ ಸಾಧಿಕಅಲಿ ಅಳವಂಡಿ ಸೆ.2ರಂದು ಕಾಣೆಯಾಗಿದ್ದು, ಅಪಹರಣ ಶಂಕೆ ವ್ಯಕ್ತವಾಗಿದೆ.

ಮಧ್ಯಾಹ್ನ 1 ಗಂಟೆಗೆ ಮನೆ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಾನೆ. ಪಾಲಕರು ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ. ಯಾರೋ ಅಪಹರಣ ಮಾಡಿದ್ದಾಗಿ ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. 2.5 ಅಡಿ ಎತ್ತರ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದಾಗ ಸಾದಾ ಹಸಿರು ಬಣ್ಣದ ಟಿ ಶರ್ಟ್​ ಮತ್ತು ಚಾಕಲೇಟ್​ ಕಲರ್​ ಪ್ಯಾಂಟ್​ ಧರಿಸಿದ್ದ. ಯಾರಿಗಾದರೂ ಬಾಲಕ ಕಂಡುಬಂದಲ್ಲಿ ಪಾಲಕರು ಅಥವಾ ಪೊಲೀಸ್​ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net