

ಕೊಪ್ಪಳ: ಜಿಲ್ಲೆಯಲ್ಲಿ ದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ಕಾನೂನು ಸಲಹಾ ಟಕ ಆರಂಭಿಸಿ ನೆರವಾಗುವಂತೆ ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಸಲಹೆ ನೀಡಿದರು.
ನಗರದ ಸಾಹಿತ್ಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ತಿರುಪತಿ ಶಿವನಗುತ್ತಿ ಅವರ ಎಂದೂ ಮುಳುಗದ ಸೂರ್ಯ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲ ಶಿತರಾಗಬೇಕು. ದಲಿತರನ್ನು ಮುಟ್ಟಿಸಿಕೊಳ್ಳಬಾರದು. ಅವರಿಗೆ ತೊಂದರೆ ಕೊಡಬೇಕು. ಅಸ್ಪ-----ೃಶ್ಯತೆ ಆಚರಿಸಬೇಕೆಂಬುದು ಮೇಲ್ವರ್ಗದವರ ಶಿಕ್ಷಣ. ಮನೆಯೇ ಮೊದಲ ಪಾಠ ಶಾಲೆ. ಅವರು ತಮ್ಮ ಮಕ್ಕಳಿಗೆ ಅದನ್ನೇ ಹೇಳಿಕೊಡುತ್ತಾರೆ. ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್, ಕೆಂಪಯ್ಯ ಸೋಮಶೇಖರ್, ನ್ಯಾಯಾಧೀಶ ಗವಾಯಿ, ರಾಷ್ಟ್ರಪತಿ ದ್ರೌಪದಿ ಮುಮುರ್ ನಮಗೆಲ್ಲ ಶಿಕ್ಷಣಕ್ಕೆ ಮಾದರಿ. ಉತ್ತಮ ಶಿಕ್ಷಣವಂತರಾಗೋಣ. ಅವರು ಕಲಿತ ಶಿಕ್ಷಣದಿಂದ ಅವರು ದೌರ್ಜನ್ಯ ಮಾಡಲಿ. ಒಂದು ದೌರ್ಜನ್ಯ ಪ್ರಕರಣದಿಂದ ನಾವು ನಾಲ್ಕು ಹೆಜ್ಜೆ ಮುಂದೆ ಹೋಗುತ್ತೇವೆಂಬುದು ಅವರಿಗೆ ಗೊತ್ತಿಲ್ಲ. ದೌರ್ಜನ್ಯ ನಡೆದಾಗ ದೂರು ದಾಖಲಿಸಲು, ಹೇಳಿಕೆ ದಾಖಲಿಸಿಕೊಳ್ಳಲು ಒಂದು ಕಾನೂನು ಸಲಹಾ ಘಟಕ ಮಾಡಿಕೊಳ್ಳಿ. ಪ್ರಕರಣ ದಾಖಲಾದ ಹಂತದಿಂದ ಹಿಡಿದು ಮುಗಿವವರೆಗೆ ಕಾನೂನು ಸಲಹೆ ಕೊಡಿ ಎಂದರು.
ಮಂಡ್ಯದ ಸಾಹಿತಿ, ಹೋರಾಟಗಾರ ಅಭಿ ಒಕ್ಕಲಿಗ ವಿಶೇಷ ಉಪನ್ಯಾಸ ನೀಡಿದರು. ಸಾಹಿತಿ ಡಿ.ರಾಮಣ್ಣ ಆಲ್ಮರ್ಸಿಕೇರಿ ಕೃತಿ ವಿಮರ್ಶೆ ಮಾಡಿದರು. ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್ ಮಾತನಾಡಿದರು. ಪ್ರಾಚಾರ್ಯ ರಾಜಶೇಖರ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಛಲವಾದಿ ಜಾಗೃತಿ ವೇದಿಕೆ ಸಂಚಾಲಕ ಕೃಷ್ಣಾ ಇಟ್ಟಂಗಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಂಚನಾ ಶಿವನಗುತ್ತಿ ರಚಿಸಿದ ಚಿತ್ರಕಲೆಗಳು, ಹೂ, ಎಲೆ ಬಳ್ಳಿಗಳ ಮೇಲೆ ಅಂಬೇಡ್ಕರ್ ಅವರು ಪಡೆದ ಪದವಿಗಳು, ಸಾಧನೆಗಳು, ಕೃತಿಗಳ ಹೆಸರು ದಾಖಲಿಸಿದ್ದು ಗಮನ ಸೆಳೆಯಿತು.
ಪ್ರಮುಖರಾದ ಜಿ.ಎಂ.ಬೆಲ್ಲದ, ಮುತ್ತುರಾಜ ಕುಷ್ಟಗಿ, ಸೋಮನಗೌಡ ಪಾಟೀಲ್, ಚಾಮರಾಜ ಸವಡಿ, ಸುರೇಂದ್ರ ಕಾಂಬ್ಳೆ, ಶೇಖರ ಹೊಸಪೇಟೆ, ಮಂಜುನಾಥ ಮ್ಯಾಗಳಮನಿ, ಗುಡದಪ್ಪ ಹಡಪದ, ವೇಣುಗೋಪಾಲ್, ಡಾ.ಶ್ರೀನಿವಾಸ ಹ್ಯಾಟಿ, ಬಸವರಾಜ ಕಡೇಮನಿ ಇತರರಿದ್ದರು.