ಪಾಕಿಸ್ತಾನಿಯರನ್ನು ಭಾರತ ಬಿಟ್ಟು ತೊಲಗಿಸಿ

district koppal bjp protest pakistan
Published on

ಕೊಪ್ಪಳ: ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು. ದೇಶದಲ್ಲಿನ ಪಾಕ್​ ಪ್ರಜೆಗಳನ್ನು ಕೂಡಲೇ ದೇಶ ಬಿಟ್ಟು ಕಳಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಉಗ್ರರು ದೇಶದ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ಭಯೋತ್ಪಾದನೆಗೆ ಮತ್ತೆ ವಿಜೃಂಭಿಸಿದೆ. ಪಾಕಿಸ್ತಾನ ನಿರಂತರ ಉಗ್ರರಿಗೆ ಬೆಂಬಲವಾಗಿ ನಿಂತಿದೆ. ಭಯೋತ್ಪಾದನೆ ಬೆಳೆಸುತ್ತಿದೆ. ಉಗ್ರರಿಗೆ ತರಬೇತಿ ನೀಡುವುದು, ಧರ್ಮದ ಹೆಸರಿನಲ್ಲಿ ಜಗತ್ತಿನಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಅಲ್ಲದೇ ಮಾಡಿದ ತಪು$್ಪ ಒಪ್ಪಿಕೊಳ್ಳದೇ ಮೊಂಡು ವಾದ ಮಾಡುತ್ತಿದೆ. ಇದು ಖಂಡನೀಯ. ದೇಶದ ಪ್ರಜೆಗಳು ಭಯೊತ್ಪಾದನೆ ಸಹಿಸುವುದಿಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದರೂ ಪಾಕಿಸ್ತಾನ ತಿದ್ದುಕೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಪಿ ಪಾಕಿಸ್ತಾನಕ್ಕೆ ತಕ್ಕ ಶಿೆ ಕಲಿಸಬೇಕು. ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ದೇಶದಲ್ಲಿ ವಾಸವಾಗಿರುವ ಪಾಕಿಸ್ತಾನ ಪ್ರಜೆಗಳನ್ನು ಕೂಡಲೇ ದೇಶ ಬಿಟ್ಟು ಕಳಿಸಬೇಕು. ಭಯೋತ್ಪಾದನೆ ಸಂಪೂರ್ಣ ನಿರ್ನಾನ ಮಾಡಬೇಕು. ಉಗ್ರೆರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು. ಪಹಲ್ಗಾಮ್​ ಹತ್ಯೆಯನ್ನು ಭಾರತೀಯರು ಸಹಿಸುವುದಿಲ್ಲ. ಪಾಕಿಸ್ತಾನ ಪ್ರಜೆಗಳೆಲ್ಲರೂ ಭಾರತ ಬಿಟ್ಟು ಹೋಗಬೇಕು. ಈಗಾಗಲೇ ನದಿ ನೀರು ಬಂದ್​ ಮಾಡಿ ಪಾಠ ಕಲಿಸಿದ್ದು, ಇನ್ನಷ್ಟು ಕಠಿಣ ನಿಯಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಪ್ರಮುಖರಾದ ಮಹಾಂತೇಶ ಪಾಟೀಲ್​ ಮೈನಳ್ಳಿ, ಎಚ್​.ಗಿರೇಗೌಡ, ರಾಜು ಬಾಕಳೆ, ಮಹಾಲಕ್ಷಿ$್ಮ ಕಂದಾರಿ, ವಾಣಿಶ್ರೀ ಮಠದ, ಗಣೇಶ ಹೊರತಟ್ನಾಳ, ಕರಿಯಪ್ಪ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net