ಕಾಂಗ್ರೆಸ್​ನಿಂದ ಗೂಂಡಾ ವರ್ತನೆ ಪ್ರದರ್ಶನ

district koppal bjp protest congress
Published on

ಕೊಪ್ಪಳ: ವಿಧಾನ ಪರಿಷತ್​ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿಲ್ಲ. ನಾನು ಅಲ್ಲೇ ಇದ್ದೆ. ಕಾಂಗ್ರೆಸ್​ ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ತಪ್ಪೆಸಗಿದ್ದರೆ ಕಾನೂನು ಕ್ರಮ ಜರುಗಿಸಬೇಕು. ಆದರೆ, ಸರ್ಕಾರ ಗೂಂಡಾ ವರ್ತನೆ ಮಾಡುತ್ತಿದೆ. ಸಚಿವೆ ಹೆಬ್ಬಾಳ್ಕರ್​ ಬೆಂಬಲಿಗರು ರವಿ ಮೇಲೆ ಹಲ್ಲೆಗೆ ಯತ್ನಿಸಿದರು. ಅವರನ್ನು ಒಳ ಬಿಟ್ಟಿದ್ದು ಯಾರು ? ಬಳಿಕ ರವಿ ಬಂಧಿಸಿದ ಪೊಲೀಸರು ಊರೂರು ಸುತ್ತಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ಟನೆ ನಡೆದಿಲ್ಲವೆಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣವರ ಮಾತನಾಡಿ, ಸಭಾಪತಿಗಳು ಇಬ್ಬರನ್ನು ಕರೆಸಿ ವಿಚಾರಿಸಿದ್ದಾರೆ. ದಾಖಲೆ ಪರಿಶೀಲಿಸಿದ್ದು, ಆ ರೀತಿ ಹೇಳಿಕೆ ನೀಡಿದ್ದಕ್ಕೆ ಪುರಾವೆಸಿಕ್ಕಿಲ್ಲ. ಆದರೂ ಉದ್ದೇಶಪೂರ್ವಕವಾಗಿ ಬಂಧಿಸಿ ಹಲ್ಲೆ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಜನಪ್ರತಿನಿಧಿಗಳ ಬಂಧನ, ವಿಚಾರಣೆಗೆ ನಿಯಮಗಳಿವೆ. ಅವುಗಳೆಲ್ಲವನ್ನೂ ಸರ್ಕಾರ ಉಲ್ಳಂಘಿಸಿದೆ ಎಂದು ಕಿಡಿ ಕಾರಿದರು.

ಸರ್ಕಾರ, ಸಿಎಂ, ಡಿಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್​ ಮೈನಳ್ಳಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಪ್ರಮುಖರಾದ ಚಂದ್ರು ಕವಲೂರು, ರಾಜು ಬಾಕಳೆ, ಪ್ರದಿಪ ಹಿಟ್ನಾಳ, ರಮೇಶ ಕವಲೂರು, ಮಹಾಲಕ್ಷಿ$್ಮ ಕಂದಾರಿ, ಮಹೇಶ ಅಂಗಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net