

ಕೊಪ್ಪಳ: ಬಾಂಗ್ಲಾ ಹಿಂದುಗಳು ಹಾಗೂ ಮಂದಿರಗಳ ಮೇಲಿನ ದಾಳಿ ಖಂಡಿಸಿ ಹಿಂದುಪರ ಸಂಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರ ದಾಳಿ ಆಗುತ್ತಿದೆ. ಈ ಹಿಂದೆಯೂ ಮಠ, ಮಂದಿರಗಳನ್ನು ನಾಶ ಮಾಡಲಾಗಿದೆ. ಆಗ ತಕ್ಕ ಪಾಠ ಕಲಿಸಿದ್ದೇವೆ. ಚೀನಾ ಹಾಗೂ ಪಾಕಿಸ್ತಾನದ ಮಾತು ಕೇಳಿ ಬಾಂಗ್ಲಾದೇಶ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಸಂತರನ್ನು ಬಂಧಿಸಿದ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾರೇ ಎಷ್ಟೇ ಪ್ರಯತ್ನಿಸಿದರೂ ಹಿಂದುಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಬಾಂಗ್ಲಾದಾ ಶೇಖ ಹನಿನಾ ಸರ್ಕಾರ ಅತಂತ್ರಗೊಳಿಸಿ, ಮಹ್ಮದ ಯೂನಿಸ್ ಎಂಬ ಕುತಂತ್ರಿ, ಮತಾಂಧ ಸರ್ಕಾರ ರಚಿಸಿದ್ದಾನೆ. ಈ ವೇಳೆ ಹಿಂದುಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಲೂಟಿ ನಡೆದಿದೆ. ಇಸ್ಕಾನ್ ಸಂಸ್ಥೆ ಇದರ ವಿರುದ್ಧ ಧ್ವ ನಿ ಎತ್ತಿತ್ತು. 150 ರಾಷ್ಟ್ರಗಳಲ್ಲಿ ಇಸ್ಕಾನ್ ಬಡವರಿಗೆ ಅನ್ನ, ಅಕ್ಷರ ನೀಡುತ್ತಿದೆ. ಕೋಮುವಾದಿ ಎಂದು ಪಟ್ಟ ಕಟ್ಟಿ ಸಂಸ್ಥೆಯ ಸನ್ಯಾಸಿಯನ್ನು ಬಂಧಿಸಲಾಗಿದೆ. ಹಿಂದುಗಳ ರಕ್ಷಣೆ ಆಗಬೇಕು. ದೌರ್ಜನ್ಯ ನಿಲ್ಲಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಗಡಿಯಾರ ಕಂಬಂದಿಂದ ಜವಾಹರ ರಸ್ತೆ ಮೂಲಕ ಅಶೋಕ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಎಸಿ ಕ್ಯಾ.ಮಹೇಶ ಮಾಲಗಿತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ದದೇಗಲ್ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ, ಡಾ.ಕೆ.ಜಿ.ಕುಲಕರ್ಣಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ಜೈನ್, ಮುಖಂಡರಾದ ಗವಿಸಿದ್ದಪ್ಪ ಕಂದಾರಿ, ಚಂದ್ರಶೇಖರ ಕವಲೂರು, ಮಧುರಾ ಕರಣಂ, ಬಸವರಾಜ ಗೌರಾ, ಪ್ರಾಣೇಶ ಮಾದಿನೂರು, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ಮಹೇಶ ಅಂಗಡಿ, ವಾಸುದೇವ ಮೇಘರಾಜ, ಮಹಾಲಕ್ಷಿ$್ಮ ಕಂದಾರಿ, ಕೀರ್ತಿ ಪಾಟೀಲ್ ಇತರರಿದ್ದರು.