

ಕೊಪ್ಪಳ : ರೈತರ ಪಹಣಿ, ಮಠದ ಆಸ್ತಿಗಳಲ್ಲಿ ವಕ್ಫ ಆಸ್ತಿ ಎಂದು ನಮೂದು ಮಾಡಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ನಾಯಕರು ಶುಕ್ರವಾರ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ಕಚೇರಿ ಮುಂಭಾಗ ಇಡೀ ದಿನ ಧರಣಿ ನಡೆಸಿ ಆದೇಶ ವಾಸಪ್ ಪಡೆಯಲು ಆಗ್ರಹಿಸಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕಾಂಗ್ರೆಸ್ ವಕ್ಫ ಮಸೂದೆ ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜಮೀರ ಅಹ್ಮದ್ ಎಂಬ ವಂಚಕ ಸಚಿವನನ್ನು ಮುಂದಿಟ್ಟುಕೊಂಡು ಬಡ ರೈತರ ಭೂಮಿ ನುಂಗಿ ಹಾಕಲು ಪ್ಲಾನ್ ಮಾಡಿದೆ. ಅದಕ್ಕಾಗಿ ತರಾತುರಿಯಲ್ಲಿ ಸಾವಿರಾರು ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ ಹೆಸರು ಸೇರಿಸಿದೆ. ವಾಪಸ್ ಪಡೆವ ಬಗ್ಗೆ ಮೌಖಿಕ ಆದೇಶ ನೀಡಿದರೆ ಲವಿಲ್ಲ. ಕ್ಯಾಬಿನೆಟ್ನಲ್ಲಿ ವಾಪಸ್ ಪಡೆವ ನಿರ್ಧಾರ ಕೈಗೊಳ್ಳಬೇಕು. ಬಳ್ಳಾರಿ, ಕೊಪ್ಪಳ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರೈತರ ಭೂಮಿ ಪಡೆಯಲು ಮಾಡಿದ ಹುನ್ನಾರ ಕೈ ಬಿಡಬೇಕು. ಅಲ್ಲಿವರೆಗೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲವೆಂದು ಕಿಡಿ ಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ವಕ್ಫ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗ ನೋಟೀಸ್ ಹಿಂಪಡೆದರೆ ಸಾಲದು. 1974ರ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು. ಯಾವುದೇ ನೋಟೀಸ್ ನೀಡದೇ ಬಿಪಿಎಲ್ ಕಾರ್ಡ್ ರದ್ದು ಮಾಡುವುದು, ಎಪಿಎಲ್ ಕಾರ್ಡ್ ಆಗಿ ಪರಿವರ್ತನೆ ಆಗಿರುವುದು ಖಂಡನೀಯ. ಸರ್ಕಾರ ಕೂಡಲೇ ಆ ಆದೇಶವನ್ನು ಮರಳಿ ಪಡೆಯಬೇಕೆಂದು ಒತ್ತಾಯಿಸಿದರು.
ಕಾಡಾ ಮಾಜಿ ಅಧ್ಯಕ್ಷ ಬಿಎಚ್ಎಂ ತಿಪ್ಪೇರುದ್ರ ಸ್ವಾಮಿ ಮಾತನಾಡಿ, ರೈತರು, ಅಹಿಂದ ವರ್ಗದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರನ್ನೇ ತುಳಿಯುತ್ತಿದ್ದಾರೆ. ತಲತಲಾಂತರದಿಂದ ಉಳುಮೆ ಮಾಡುವ ಭೂಮಿ ವಕ್ಫ ಆಸ್ತಿ ಎನ್ನುತ್ತಿದ್ದಾರೆ. ಅವರು ವಕ್ಫ ಎಂದು ಬರೆದುಕೊಂಡರೆ ಸಾಕು. ದಾಖಲೆಗಳು ಬೇಕಿಲ್ಲ. ಆದರೆ, ನಮ್ಮ ಭೂಮಿಗೆ ನಾವು ದಾಖಲೆ ತೋರಿಸಬೇಕು. ಇದ್ಯಾವ ನ್ಯಾಯ ಸ್ವಾಮಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ, ಸಿಎಂ, ಡಿಸಿಎಂ, ಸಚಿವ ಜಮೀರ್ ಖಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಕೃತಿ ಪ್ರದರ್ಶಿಸಿ ಟೀಕಿಸಿದರು. ಮಹಿಳಾ ಕಾರ್ಯಕರ್ತೆಯರು, ಕಾಂಗ್ರೆಸ್ ಜಾಲಿ, ಜಾಲಿ, ರೈತರು ಖಾಲಿ, ಖಾಲಿ ಎಂದು ಟ್ರೆಂಡಿಂಗ್ ಶೈಲಿಯ ಘೋಷಣೆ ಕೂಗಿ ಹಿಯಾಳಿಸಿದರು. ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಂಗಳೂರಿನ ಸಿದ್ದಲಿಂಗ ಶಿವಾಚಾರ್ಯ, ಕುಕನೂರಿನ ಅನ್ನದಾನೇಶ್ವರ ಶ್ರೀ, ಮೈನಳ್ಳಿ&ಬಿಕನಳ್ಳಿಯ ಶಿವಾಚಾರ್ಯ ಸ್ವಾಮೀಜಿ ಬೆಂಬಲ ನೀಡಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಮಾಜಿ ಶಾಸಕ ಬಸವರಾಜ ದಢೇಸುಗೂರು, ಪ್ರಮುಖರಾದ ಮಹಾಂತೇಶ ಪಾಟೀಲ್ ಮೈನಳ್ಳಿ, ಗಿರೇಗೌಡ, ವಿರೇಶ ಸಾಲೋಣಿ, ಕರಿಯಣ್ಣ ಸಂಗಟಿ, ಗಣೇಶ ಹೊರತಟ್ನಾಳ, ಮಹಾಲಕ್ಷಿ$್ಮ ಕಂದಾರಿ, ಕೀರ್ತಿ ಪಾಟೀಲ್, ಶೋಭಾ ನಗರಿ, ಮಧುರಾ ಕರಣಂ ಸೇರಿ ವಿವಿಧ ಕಾರ್ಯಕರ್ತರು ಇದ್ದರು.