ಕೊಪ್ಪಳ: ಕಮಲ ಪಾಳಯದಲ್ಲಿ ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರ ನೇಮಕವಾಗಿದ್ದು, ಪಕ್ಷದ ನಿಯಮದಂತೆ ಸೋಮವಾರ ಅಪೇತರಿಂದ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ನಾಲ್ವರು ಆಕಾಂಗಳ ಪಟ್ಟಿಯನ್ನು ಹೈಕಮಾಂಡ್ಗೆ ರವಾನೆ ಮಾಡಲಾಗಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಬದಲಾವಣೆ ಆಗಲಿದೆ. ಈ ಹಿಂದೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಚುನಾಯಿತರಾದ ಬಳಿಕ ಚುನಾವಣೆ ಹಾಗೂ ಪಕ್ಷದ ಜವಾಬ್ದಾರಿ ಬೇರೊಬ್ಬರಿಗೆ ವಹಿಸುವ ಮಾತು ಕೇಳಿ ಬಂದಿದ್ದವು. ಬದಲಾದ ರಾಜಕೀಯದಲ್ಲಿ ಹಲವರ ಪೈಪೋಟಿ ನಡುವೆ ಚುನಾವಣೆ ಇದ್ದ ಕಾರಣ ನವೀನ ಗುಳಗಣ್ಣವರ ಅವರಿಗೆ ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿತ್ತು.
ಸದ್ಯ ನಗರ ಹಾಗೂ ತಾಲೂಕು ಟಕಗಳ ಪದಾಧಿಕಾರಿಗಳ ನೇಮಕಾತಿ ಮುಗಿದಿದ್ದು, ಜಿಲ್ಲಾ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಶುರುವಾಗಿದೆ. ಸೋಮವಾರ ಪಕ್ಷದ ಕಚೇರಿಯಲ್ಲಿ 90ಕ್ಕೂ ಹೆಚ್ಚು ಅಪೇತರು ಯಾರು ಜಿಲ್ಲಾಧ್ಯಕ್ಷರಾಗಬೇಕೆಂದು ಸೂಚಿಸಿದರು. ಚಿತ್ರದುರ್ಗ ವಿಪ ಸದಸ್ಯ ನವೀನ ಕುಮಾರ್ ವೀಕ್ಷಕರಾಗಿ ಆಗಮಿಸಿ ಅಭಿಪ್ರಾಯ ಸಂಗ್ರಹಿಸಿದರು. ಚುನಾವಣಾಧಿಕಾರಿಗಳಾಗಿ ನರಸಿಂಗರಾವ್ ಕುಲಕರ್ಣಿ, ಕೆ. ಮಹೇಶ ಕಾರ್ಯನಿರ್ವಹಿಸಿದರು.
ಹಾಲಿ ಅಧ್ಯಕ್ಷ ನವೀನಕುಮಾರ್ ಗುಳಗಣ್ಣವರ, ಚಂದ್ರು ಕವಲೂರು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಮುಖಂಡರಾದ ಮಹಾಂತೇಶ ಮೈನಳ್ಳಿ, ಮಂಜುನಾಥ ಅಂಗಡಿ, ಮಹೇಶ ಅಂಗಡಿ ಹೆಸರುಗಳು ಪ್ರಮುಖವಾಗಿ ಕೇಳಿ ಬಂದವು. ಪಕ್ಷದ ನಿಯಮದಂತೆ 45 ರಿಂದ 60 ವರ್ಷದೊಳಗಿನವರಿಗೆ ಜಿಲ್ಲಾಧ್ಯಕ್ಷ ಜವಾಬ್ದಾರಿ ವಹಿಸಲಾಗುತ್ತದೆ ಎನ್ನಲಾಗಿದೆ. ಎಂಟು ಮಂದಿ ಹೆಸರುಗಳು ಪ್ರಸ್ತಾಪವಾಗಿದ್ದು, ಅಪೇತರ ವೈಯಕ್ತಿಕ ಅಭಿಪ್ರಾಯ ಗುಪ್ತವಾಗಿ ಪಡೆದ ವೀಕ್ಷಕರು ಅಂತಿಮವಾಗಿ ನಾಲ್ವರು ಆಕಾಂಗಳ ಹೆಸರನ್ನು ಹೈಕಮಾಂಡ್ಗೆ ಶಿಾರಸ್ಸು ಮಾಡುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಹಾಲಿ ಅಧ್ಯಕ್ಷ ನವೀನ್ ಪಕ್ಷದ ಜವಾಬ್ದಾರಿ ವಹಿಸಿಕೊಂಡು ವರ್ಷ ಕಳೆದಿದ್ದು, ಕಮಲ ಪಾಳಯ ಯಾರಿಗೆ ಹೊಸದಾಗಿ ಅಧ್ಯಕ್ಷಗಿರಿ ಚುಕ್ಕಾಣಿ ನೀಡಲಿದೆ ಎಂಬ ಕುತೂಹಲ ಜಿಲ್ಲೆಯ ಕಮಲ ಪಾಳಯದಲ್ಲಿ ಮನೆ ಮಾಡಿದೆ.