

ಕೊಪ್ಪಳ : ಗಂಗಾವತಿ ನಗರದಲ್ಲಿ ಸಿನಿಮಿಯ ಮಾದರಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ (31) ಬರ್ಬರ ಕೊಲೆಯಾಗಿದೆ. ಕಾರ್ ನಲ್ಲಿ ಬಂದ ಕೊಲೆಗಾರರು ಬುಧವಾರ ಬೆಳಗಿನ ಜಾವ 2 ಗಂಟೆಗೆ ಗಂಗಾವತಿಯ ಲೀಲಾವತಿ ಎಲುಬು ಕೀಲು ಆಸ್ಪತ್ರೆ ಮುಂಭಾಗದಲ್ಲಿ ಮಚ್ಚಿನಿಂದ ಕೊಚ್ಚಿ ಹತೈಗಿದಿದ್ದಾರೆ.
ಊಟ ಮಾಡಿಕೊಂಡು ದೇವಿ ಕ್ಯಾಂಪಿನಿಂದ ಗಂಗಾವತಿ ಬರುತ್ತಿದ್ದ ವೆಂಕಟೇಶನನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಬೈಕ್ ಗೆ ಕಾರ್ ಗುದ್ದಿಸಿದ್ದಾರೆ. ಬಳಿಕ ಸುತ್ತಲೂ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಪರಾರಿಯಾಗಿದ್ದಾರೆ. ಕಾರ್ ಟೈಯರ್ ಬ್ಲಾಸ್ಟ್ ಆದ ಕಾರಣ ವಿಜಯನಗರ ಕಾಲನಿಯಲ್ಲಿ ಬಿಟ್ಟು ಹೋಗಿದ್ದಾರೆ. ಇದು ಟಾಟಾ ಇಂಡಿಕಾ ಕಾರ್. ಕಾರಿನಲ್ಲಿ ಕೊಲೆಗೆ ಬಳಕೆಯಾದ ಮಚ್ಚು ದೊರೆತಿವೆ.
ಸ್ಥಳಕ್ಕೆ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ ನೀಡಿ ಮಾಹಿತಿ ಪಡೆದರು. ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಪ್ರಾಥಮಿಕವಾಗಿ ಹಳೇ ದ್ವೇಷ ಕಾರಣವೆಂದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಮಿಸಿ ಸಾಕ್ಷ್ಯ ಕಲೆ ಹಾಕುತ್ತಿದೆ.