

ಕೊಪ್ಪಳ: ನೆರೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದು ಸಿಎಂ ವೈಮಾನಿಕ ಸಮೀೆ ಮಾಡಿ ಸುಮ್ಮನಾಗಿದ್ದಾರೆ. ಅನ್ನದಾತರಿಗೆ ಪರಿಹಾ ಕೊಡುವ ಕೆಲಸ ಮಾಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಸಿಎಂ ಇದ್ದಾಗ 60 ಸಾವಿರ ಕೋಟಿ ರೂ. ಪರಿಹಾರ ತಕ್ಷಣ ಬಿಡುಗಡೆ ಮಾಡಿದ್ದರು. ಈಗ ಅನ್ನದಾತರು ಕಣ್ಣೀರು ಹಾಕಿದರೂ ಸಿಎಂ ಕೊಡುವ ಮನಸ್ಸು ಮಾಡುತ್ತಿಲ್ಲ. ಸಮೀೆ, ಗ್ಯಾರಂಟಿ ಅಮಲಿನಲ್ಲಿ ತೇಲುತ್ತಿದ್ದಾರೆ. ವಿಮಾನದಲ್ಲಿ ಓಡಾಡಿದರೆ ರೈತರ ಕಷ್ಟ ತಿಳಿಯದು. ಕೆಳಗಿಳಿದು ಅವರ ನೋವು ಆಲಿಸುವ ಕೆಲಸ ಮಾಡಲಿ. ಒಂದೆಡೆ ಗ್ಯಾರಂಟಿ ಕೊಡುವುದಾಗಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಎಲ್ಲ ಬೆಲೆಗಳನ್ನು ಏರಿಕೆ ಮಾಡಿ ಜನರಿಗೆ ಬರೆ ಎಳೆದಿದ್ದಾರೆಂದು ಆರೋಪಿಸಿದರು.
ಸಚಿವ ಪ್ರಿಯಾಂಕ್ ರ್ಖಗೆ ಆರ್ಎಸ್ಎಸ್ ಬ್ಯಾನ್ ಮಾಡಬೇಕೆಂದು ಹೇಳಿದ್ದಾರೆ. ಅವರು ಮೊದಲು ಪಾರದರ್ಶಕವಾಗಿ ಆಡಳಿತ ಮಾಡಲಿ. ಚಾಕು, ಚೂರಿ ಹಿಡಿದವರಿಗೆ ಪ್ರೋತ್ಸಾಹಿಸುವುದನ್ನು ನಿಲ್ಲಿಸಲಿ. ಸಂ ಪರಿವಾರ ಬಡಿಗೆ ಹಿಡಿದು ದೇಶ ರಸುತ್ತಿದೆ. ಕೇವಲ ಒಂದು ಧರ್ಮ ಒಲೈಸುವುದು ಸರಿಯಲ್ಲ. ಮತದಾರ ನಿಮ್ಮನ್ನು ಗಮನಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ. ಸಂ ಬ್ಯಾನ್ ಮಾಡಲು ಮುಂದಾದ ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನೀಡಿದ ಆದೇಶವನ್ನು ಒಮ್ಮೆ ಓದಿ ಎಂದು ಚಾಟಿ ಬೀಸಿದರು.
ಪಕ್ಷದ ಪ್ರಮುಖರಾದ ಸುನಿಲ್ ಹೆಸರೂರು, ಗಣೇಶ ಹೊರತಟ್ನಾಳ, ಕೀರಪ್ಪ ಇತರರಿದ್ದರು.
ಸದ್ವೇಶಿ ವಸ್ತು ಬಳಕೆಗೆ ಅಭಿಯಾನ
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ದೇಶ ಸ್ವಾತಂತ್ರ$್ಯ ಪಡೆದು 76 ವರ್ಷ ಗತಿಸಿವೆ. 2047ಕ್ಕೆ ನೂರು ವರ್ಷವಾಗಲಿದೆ. ಅಷ್ಟರಲ್ಲಿ ದೇಶವನ್ನು ಸ್ವಾವಲಂಬಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಪೂರಕವಾಗಿ ಪಕ್ಷದಿಂದ ಡಿ.25ವರೆಗೆ ಸ್ವದೇಶಿ ವಸ್ತುಗಳ ಬಳಕೆ, ಉತ್ಪಾದನೆ ಪ್ರೋತ್ಸಾಹಿಸಲು ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ 10 ವರ್ಷದಲ್ಲಿ ಮೇಕ್ ಇನ್ ಇಂಡಿಯಾ, ವೋಕಲ್ ಾರ್ ಲೋಕಲ್ ನಡಿ ಸ್ವದೇಶಿ ವಸ್ತುಗಳ ಉದ್ಯಮ ಪ್ರೋತ್ಸಾಹಿಸಲಾಗುತ್ತಿದೆ. ಶ್ರೀ ಸಭೆ ನಡೆಸಿ ಕಾರ್ಯಕ್ರಮ ರೂಪುರೇಷೆ ಸಿದ್ಧಪಡಿಸಲಾಗುವುದೆಂದರು.