ಮೋದಿಯಿಂದ ಪ್ರಭತ್ವದ ಉಳಿವು, ಡಾ.ಬಸವರಾಜ ಕ್ಯಾವಟರ್​ ಅಭಿಮತ

district koppal bjp dr.basavaraj kyavater central govt
Published on

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ದೇಶ ಯಶಸ್ವಿಯಾಗಿ 11 ವಸಂತಗಳನ್ನು ಪೂರೈಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿವಲ್ಲಿ ಮೋದಿ ಪಾತ್ರ ಅನನ್ಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ 11 ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಅಭಿವೃದ್ಧಿಗೆ ಮೋದಿ ಮುನ್ನುಡಿ ಬರೆದಿದ್ದಾರೆ. ಸದೃಢ ಭಾರತ ನಿರ್ಮಾಣದ ಕನಸು ಹೊತ್ತು ಸಾಕಾರಗೊಳಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚುತ್ತಿದೆ. ದೇಶದ ಸಮಗ್ರತೆ, ಸಾಂಸತಿಕ ಪರಂಪರೆ ಉಳಿಸುವ ಕೆಲಸವಾಗುತ್ತಿದೆ. ಜಾತಿ, ಧರ್ಮ, ಪ್ರಾದೇಶಿಕ ಅಸಮಾನತೆ ತೊಲಗಿಸುವ ಯತ್ನ ನಡೆದಿದೆ. 2047ರ ಹೊತ್ತಿಗೆ ವಿಕಸಿತ ಭಾರತ ಮಾಡಬೇಕೆಂಬ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ದೇಶದ ಜನರೆಲ್ಲ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಪ್ರಧಾನಿ ಮೋದಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಮಹಿಳೆಯರಿಗೆ ರಾಜಕೀಯ ಮೀಸಲು ಜಾರಿಗೆ ಯತ್ನ ನಡೆದಿದೆ. ಎಲ್ಲ ರಂಗದಲ್ಲೂ ಮಹಿಳೆ ಪುರುಷನಿಗೆ ಸಮಾನಾವಾಗಿ ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಕಳೆದ 11 ವರ್ಷದಲ್ಲಿ ದೇಶ ಹಿಂದಗಿಂತ ಅತಿ ವೇಗವಾಗಿ ಬೆಳವಣಿಗೆ, ಅಭಿವೃದ್ಧಿ ಆಗುತ್ತಿದೆ. ದೇಶದ ಮತದಾರ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.

ಕಾರ್ಯಕ್ರಮ ಸಂಚಾಲಕ ಶ್ರೀಧರ ಕೇಸರಟ್ಟಿ, ಪ್ರಮುಖರಾದ ಸುನಿಲ್​ ಹೆಸರೂರು, ಪ್ರಕಾಶ ವಕೀಲ, ಪ್ರದಿಪ್​ ಹಿಟ್ನಾಳ, ಮಹೇಶ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net