

ಕೊಪ್ಪಳ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿರುವ ಸರ್ಕಾರ ಕೊಪ್ಪಳದ ರೈತರಿಗೂ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ. ರೈತರನ್ನು ಯಾಮಾರಿಸಿ ಆಸ್ತಿ ವಶಕ್ಕೆ ಮುಂದಾಗಿರುವುದು ಕಾಂಗ್ರೆಸ್ ಸತಕಾರದ ರೈತ ವಿರೋಧಿ ನಡೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಖಂಡಿಸಿದ್ದಾರೆ.
ವಕ್ಫ್ ಮಂಡಳಿ ಬೆನ್ನಿಗೆ ನಿಂತಿರುವ ಸರ್ಕಾರ ಅನ್ನದಾತರ ಬೆನ್ನಿಗೆ ಚೂರಿ ಹಾಕುತ್ತಿದೆ. ಜಿಲ್ಲಾದ್ಯಂತ 3475 ಎಕರೆಗೂ ಅಧಿಕಆಸ್ತಿ ಹೊಂದಿರುವುದಾಗಿ ಹೇಳುವ ಬೋರ್ಡ್ ಯಾವಾಗಾ ಯಾರಿಂದ ಬಂದಿದ್ದು ಎಂಬುದನ್ನು ಬಹಿರಂಗಪಡಿಸಬೇಕಿದೆ. ಜಿಲ್ಲೆಯಲ್ಲಿ ಒಟ್ಟು 700 ಎಕರೆ ಆಸ್ತಿಯಲ್ಲಿ ವಕ್ಫ ಆಸ್ತಿ ಎಂದು ನಮೂದಿಸಿದೆ. ರೈತರಲ್ಲಿ ಆತಂಕ ಉಂಟಾಗಿದೆ.
ಕುಕನೂರು ತಾಲೂಕಿನಲ್ಲಿ 481 ಎಕರೆ ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿದೆ. ವಕ್ಸ್ ಬೋರ್ಡ್ 1974ರಲ್ಲಿ ಸ್ಥಾಪಿತ ಗೊಂಡಿದ್ದು ಅದಕ್ಕಿಂತ ನೂರಾರು ವರ್ಷಗಳ ಹಿಂದಿನಿಂದ ಒಡೆತನ ಹೊಂದಿರುವ ಭೂಮಿಯನ್ನು ಸಹ ಕಸಿದುಕೊಳ್ಳುತ್ತಿರುವು ಲವ್ ಜಿಹಾದ್ ತರಹವೇ ಲ್ಯಾಂಡ್ ಜಿಹಾದ್ದ್ ಆಗಿದೆ. ರಾಜಕೀಯ ಲಾಭಕ್ಕಾಗಿ ಕೆಲವರು ವಕ್ಸ್ ಬೋರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ರೈತ ಪರ ಸಂಘಟನೆಗಳ ಜೊತೆಯಲ್ಲಿ ಉಗ್ರ ಹೋರಾಟಕ್ಕೆ ಸಜ್ಜಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಜನತೆಯ ಜೊತೆಯಲ್ಲಿ ನಮ್ಮ ಪಕ್ಷದ ಹಿರಿಯರು ಹಾಗೂ ನಮ್ಮ ಕಾರ್ಯಕರ್ತರು ಸದಾ ಇರಲಿದ್ದಾರೆ. ರೈತರ ಭೂಮಿ ಅವರಿಗೆ ಮರಳಿ ಕೊಡಿಸುವವರೆಗೆ ಹೋರಾಟ ನಿಲ್ಲುವುದಿಲ್ಲವೆಂದು ತಿಳಿಸಿದ್ದಾರೆ.