ರಾಜ್ಯ ಸರ್ಕಾರ ಐದು ವರ್ಷ ಪೂರೈಸದು, ಮಾಜಿ ಸಚಿವ ಹಾಲಪ್ಪ ಆಚಾರ್​ ಹೇಳಿಕೆ

BJP coure committee meeting in koppal
ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪ್ರಮುಖರಾದ ಡಾ.ಕೆ.ಜಿ.ಕುಲಕರ್ಣಿ, ಅಪ್ಪಣ್ಣ ಪದಕಿ, ಆರ್​.ಬಿ.ಪಾನಂಟಿ ಇದ್ದರು.
Published on

ಕೊಪ್ಪಳ: ರಾಜ್ಯ ಕಾಂಗ್ರೆಸ್​ ಸರ್ಕಾರ ಐದು ವರ್ಷ ಯಶಸ್ವಿಯಾಗಿ ಪೂರೈಸುವುದಿಲ್ಲ. ಅಧಿವೇಶನ ಬಳಿಕ ತಮ್ಮಲ್ಲೇ ಕಚ್ಚಾಡಿಕೊಂಡು ಸರ್ಕಾರ ಬೀಳಿಸುತ್ತಾರೆಂದು ಮಾಜಿ ಸಚಿವ ಹಾಲಪ್ಪ ಆಚಾರ್​ ಭವಿಷ್ಯ ನುಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಸುಳ್ಳು ಭರವಸೆ ನೀಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ. ಜನರಿಗೆ ಮೋಸ ಮಾಡುವ ಅವರು ಉದ್ಧಾರ ಆಗುವುದಿಲ್ಲ. ಬಿಜೆಪಿ ಸಂಟನೆ ಮೂಲಕ ಅಧಿಕಾರ ಪಡೆದಿದೆ. ಸಂಟಿಸುವ ಕಾರ್ಯ ನಿರಂತರ ಇರಲಿದೆ. ಪಕ್ಷ ಸಂಟನೆ ಮುಂದುವರಿಸಿದಲ್ಲಿ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ. ಕೇಂದ್ರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಭಿವೃದ್ಧಿ ಬಿಟ್ಟು ಖಜಾನೆ ಖಾಲಿ ಮಾಡಿದೆ. ಇದನ್ನು ಶಾಸಕ ರಾಯರಡ್ಡಿಯವರೇ ಹೇಳುತ್ತಿದ್ದಾರೆ. ಸಾಲು ಸಾಲು ಹಗರಣಗಳ ಹೊರಬರುತ್ತಿವೆ. ಈ ಬಗ್ಗೆ ನಾವು ಬೂತ್​ ಮಟ್ಟದವರೆಗೆ ತಲುಪಿಸುವ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ರಾಜ್ಯಾಧ್ಯಕರು ಜಿಲ್ಲಾವಾರು ಪಕ್ಷ ಸಂಟನೆಗೆ ಸೂಚಿಸಿದ್ದಾರೆ. ಅದರಂತೆ ತಳಮಟ್ಟದಿಂದ ಪಕ್ಷ ಬಲಪಡಿಸಬೇಕಿದೆ. ಜಿಲ್ಲೆಯ 150-200 ಅಪೇತರು, ಪ್ರಮುಖರು, ಪ್ರಕೋಷ್ಠಗಳ ಪ್ರಮುಖರ ಸಭೆ ನಡೆಸಲಾಗುತ್ತಿದೆ. ನೀವೆಲ್ಲ ಶಕ್ತಿಕೇಂದ್ರ, ಬೂತಮಟ್ಟದ ಕಾರ್ಯಕರ್ತರಿಗೆ ವಿಷಯ ತಲುಪಿಸಿ. ಪಕ್ಷ ಸಂಟನೆ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೋರಾಟ ಮಾಡಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ನಾನು ಜಿಲ್ಲಾಧ್ಯಕ್ಷನಾದಾಗಿನಿಂದಲೂ ಎಲ್ಲರೂ ಸಹಕಾರ ನೀಡಿದ್ದೀರಿ ಎಂದರು.

ವಿಧಾನಸಭೆ ವಿಪಕ್ಷ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್​, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕರಾದ ಜಿ.ವೀರಪ್ಪ, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ್​, ಶಿವಲೀಲಾ ದಳವಾಯಿ, ಪ್ರಧಾನ ಕಾರ್ಯದರ್ಶಿಗಳಾದ ಶಿವು ಅರಕೇರಿ, ಸುನೀಲ್​ ಹೆಸರೂರು, ಖಜಾಂಚಿ ನರಸಿಂಗರಾವ್​ ಕುಲಕರ್ಣಿ, ಪ್ರಮುಖರಾದ ಡಾ.ಕೆ.ಜಿ.ಕುಲಕರ್ಣಿ, ಅಪ್ಪಣ್ಣ ಪದಕಿ, ಆರ್​.ಬಿ.ಪಾನಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net