ನಾರಾಯಣಸ್ವಾಮಿಗೆ ಅವಮಾನ ಖಂಡಿಸಿ ಹೋರಾಟ

district koppal bjp leader basavaraj dadesguru cm flood
Published on

ಕೊಪ್ಪಳ: ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಿತ್ತಾಪುರದಲ್ಲಿ ಅವಮಾನ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನು ಖಂಡಿಸಿ ಇಂದು (ಮೇ 24) ಕಲಬುರ್ಗಿಯಲ್ಲಿ ಬೃಹತ್​ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾರಾಯಣಸ್ವಾಮಿ ಆನೆ ಹೋಗುವಾಗ ಶ್ವಾನ ಬೊಗಳಿದರೆ ಏನು ಆಗಲ್ಲ ಎಂಬ ಗಾದೆ ಮಾತು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನಿತ್ಯ ಹಲವು ಕಾಂಗ್ರೆಸ್​ ನಾಯಕರು ಮಾತನಾಡುತ್ತಾರೆ. ಅವರ ಬಗ್ಗೆ ಮಾತನಾಡಿದರೆ ತಾವು ಮಾಧ್ಯಮಗಳಲ್ಲಿ ಬರುತ್ತೇವೆ. ನಾಯಕರಾಗುತ್ತೇವೆ ಎಂಬ ಕಲ್ಪನೆಯಲ್ಲಿದ್ದಾರೆ. ಆದರೆ ಜನರಿಂದ ದೂರ ಆಗುತ್ತಿದ್ದಾರೆ. ಹೀಗಿದ್ದರೂ ನಾರಾಯಣ ಸ್ವಾಮಿ ಆಡಿದ ಒಮದೇ ಮಾತು ನೆಪ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಸಚಿವ ಪ್ರಿಯಾಂಕ್​ ರ್ಖಗೆ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ. ಚಿತ್ತಾಪುರಕ್ಕೆ ಹೋದಾಗ ಗಲಾಟೆ ಮಾಡಿಸಿದ್ದಾರೆ. ಕಾರಿಗೆ ಮಸಿ ಹಾಕಿದ್ದಾರೆ. ಗೂಂಡಾಗಳಂತೆ ವರ್ತಿಸಿದ್ದಾರೆ. ಐದು ಗಂಟೆಗಳ ಕಾಲ ದಿಗ್ಬಂಧನ ಮಾಡಿದ್ದಾರೆ. ಬೆಳಗಾವಿಯಲ್ಲಿ ಸಿ.ಟಿ.ರವಿ ಅವರಿಗೆ ಮಾಡಿದಂತೆ ಚಿತ್ತಾಪುರದಲ್ಲಿ ಮಾಡಿದ್ದಾರೆ. ಇದು ಶೋಭೆ ತರುವ ಕೆಲಸವಲ್ಲ. ನೀವು ಇದನ್ನೇ ಮುಂದುವರೆಸಿದರೆ ನಮ್ಮ ಕಾರ್ಯಕರ್ತರು ಕೈ ನಾಯಕರು ಬಂದಾಗ ಇದೇ ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಘಟನೆ ಖಂಡಿಸಿ ಕಲಬುರ್ಗಿಯಲ್ಲಿ ಬೃಹತ್​ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತೇವೆ. ಇಂಥ ಘಟನೆ ಸಹಿಸಲಾಗುವುದಿಲ್ಲ. ಸಿಎಂ ರಾಜ್ಯಕ್ಕೆ ಉತ್ತರದಾಯಿ. ಅವರನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಪ್ರಶ್ನೆಗೆ ಸೂಕ್ತ ಉತ್ತರ ನೀಡಬೇಕು. ನಮ್ಮ ಕಾರ್ಯಕರ್ತರು ಬೆಳಗಾವಿಯಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರಶ್ನಿಸಿದ್ದಾರೆ. ಆ ಘಟನೆ ಬೇರೆ. ಪ್ರಿಯಾಂಕ್​ ರ್ಖಗೆ ಒಡೆತನದ ಟ್ರಸ್ಟ್​ ಗೆ ಭೂಮಿ ಹಂಚಿಕೆ ಮಾಡಿದ ವಿಷಯ ನಾರಾಯಣಸ್ವಾಮಿ ಬಯಲು ಮಾಡಿದರು. ಭೂಮಿ ವಾಪಸ್​ ಹೋಯಿತು. ಇದರಿಂದ ನಾರಾಯಣಸ್ವಾಮಿ ವಿರುದ್ಧ ರ್ಖಗೆ ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದರು.

ಟಿಬಿ ಡ್ಯಾಂಗೆ ಒಳಹರಿವು ಹೆಚ್ಚಿದೆ. ಇನ್ನೂ ಕ್ರಸ್ಟ್​ ಗೇಟ್​ ಅಳವಡಿಸಿಲ್ಲ. ಮುಂಗಾರು ಬೆಳೆಗೆ ನೀರು ಸಿಗುವುದು ಅನುಮಾನ ಮೂಡಿಸಿದೆ. ಭಾಚಣ ಮಾಡದೆ ಕೆಲಸ ಮಾಡಲಿ. ಯಾವುದೇ ಕಾರಣಕ್ಕೂ ರೈತರಿಗೆ ನೀರು ನಿಲ್ಲಿಸಬಾರದು ಎಂದು ಆಗ್ರಹಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಪ್ರಮುಖರಾದ ಸುನಿಲ್​ ಹೆಸರೂರು, ಗಣೇಶ ಹೊಟರತಟ್ನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net