ಕೊಪ್ಪಳ: ನಗರದ ಹೊರವಲಯದ ಹೂವಿನಾಳ ರಸ್ತೆ ಸಮೀಪ ದ್ವಿಚಕ್ರವಾಹನದಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹೊಸಪೇಟೆಯ ಜಾರ್ ತಂದೆ ಮಾಬುಸಾಬ್ ಹಾಗೂ ಕೊಪ್ಪಳದ ಮೇರಾಜ ಬಂಧಿತರು. ಇಬ್ಬರು ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಸ್ಕೂಟಿಯಲ್ಲಿ ವೀಲಿಂಗ್ ಮಾಡಿದ್ದಾರೆ. ಈ ಬಗ್ಗೆ ಶಂಭು ಎಂಬಾತ ಗ್ರಾಮೀಣಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪಿಎಸ್ಐ ಅಶೋಕ ಬೇವೂರು ತಂಡ ಸ್ಥಳಕ್ಕೆ ತೆರಳಿ ಬೈಕ್ ತಡೆಯುವಂತೆ ಸೂಚಿಸಿದ್ದಾರೆ. ಹೆದರಿದ ಸವಾರರು ವೇಗವಾಗಿ ತೆರಳಿದ್ದಾರೆ. ಬೆನ್ನಟ್ಟಿದ ಪೊಲೀಸರು ಬೈಕ್ ಸಮೇತ ಹಿಂಬದಿ ಕೂತಿದ್ದ ಮೇರಾಜನನ್ನು ಹಿಡಿದಿದ್ದಾರೆ. ಆತನಿಂದ ಜಾಪರ್ನ ಮಾಹಿತಿ ಪಡೆದು ಬಂಧಿಸಲಾಗಿದೆ. ಸ್ಕೂಟಿ ವಶಕ್ಕೆ ಪಡೆದಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.