ಕೊಪ್ಪಳ: ಎಲೆಕ್ಟ್ರಿಕ್ ಬೈಕ್ ರಿಪೇರಿ ಮಾಡಿಕೊಡದೆ, ಬೈಕ್ ಹಿಂದುರಿಗಿಸದ ಗಂಗಾವತಿ ಬಿವಿಎಸ್ ಮೋರ್ಟಸ್ಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಗಂಗಾವತಿ ನಗರದ ಹಿರೇ ಜಂತಕಲ್ ನಿವಾಸಿ ಮಮತಾ ಎಸ್. ಕಲಿಗೌಡ್ರು 84 ಸಾವಿರ ರೂ. ನೀಡಿ ಬಿವಿಎಸ್ ಮೋರ್ಟಸ್ನಲ್ಲಿ ಮ್ಯಾಗ್ನಮ್ ಪ್ರೋ ಎಲೆಕ್ಟ್ರಿಕಲ್ ಸ್ಕೂಟಿ ಎಚ್ಎಸ್ಎನ್ ಖರೀದಿ ಮಾಡಿದ್ದಾರೆ. 2022ರ ಸೆಪ್ಟಂಬರ್ 16ರಂದು ಬ್ಯಾಟರಿ ಬ್ಯಾಕಪ್ ರಿಪೇರಿ ಕೆಲಸಕ್ಕೆ ಬಿವಿಎಸ್ ಮೋರ್ಟಸ್ ಶೋರೂಮ್ಗೆ ವಾಹನ ಬಿಟ್ಟಿದ್ದಾರೆ. ಒಂದೆರೆಡು ದಿನದಲ್ಲಿ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದ್ದು ಮಾಡಿ ಕೊಟ್ಟಿಲ್ಲ. ಹಲವು ದಿನ ಮುಂದೂಡಿದ್ದಾರೆ. ಬಳಿಕ ಶೋ ರೂಮ್ ಬಂದ್ ಮಾಡಿದ್ದು, ಮೊಬೈಲ್ ಸ್ವಿಚ್ ಆ್ ಮಾಡಿಕೊಂಡಿದ್ದಾರೆ. ಮನೆಗೆ ತೆರಳಿ ವಿಚಾರಿಸಿದರೂ ಸರಿಯಾದ ಉತ್ತರ ನೀಡಿಲ್ಲ.
2024ರ ಆಗಸ್ಟ್ 24ರಂದು ವಕೀಲರ ಮೂಲಕ ಮಮತಾ ನೋಟಿಸ್ ನೀಡಿದ್ದಾರೆ. ಇದಕ್ಕೂ ಉತ್ತರಿಸದಿದ್ದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ. ಆಯೋಗ ದೂರು ದಾಖಲಿಸಿಕೊಂಡು ಶೋರೂಮ್ ಮಾಲೀಕರಿಗೆ ನೋಟಿಸ್ ನೀಡಿದೆ. ಹಾಜರಾಗದಿದ್ದಾಗ ವಿಚಾರಣೆ ನಡೆಸಿದ್ದು, ಶೋರೂಮ್ ಸೇವಾ ನೂನ್ಯತೆ ಎಸಗಿರುವುದು ದೃಢಪಟ್ಟಿದೆ. ಮಮತಾ ಅವರಿಗೆ ವಾಹನ ರಿಪೇರಿ ಮಾಡಿ ನೀಡಬೇಕು. ಇಲ್ಲದಿದ್ದರೆ ವಾಹದನ ಮೊತ್ತ 71,400 ರೂ. ಹಾಗೂ ಮಾನಸಿಕ ಹಿಂಸೆಗೆ 10 ಸಾವಿರ ರೂ. ಮತ್ತು ಪ್ರಕರಣದ ವೆಚ್ಚ 5 ಸಾವಿರ ರೂ. 45 ದಿನದೊಳಗೆ ಪಾವತಿಸುವಂತೆ ಆಯೋಗದ ಜಿಲ್ಲಾಧ್ಯೆ ಜಿ.ಇ.ಸೌಭಾಗ್ಯಲಕ್ಷಿ$್ಮ, ಸದಸ್ಯ ರಾಜು ಎನ್.ಮೇತ್ರಿ ಆದೇಶಿಸಿದ್ದಾರೆ.