ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಆಗಮನ 11ಕ್ಕೆ

Published on

ಕೊಪ್ಪಳ: ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಮೇ 11ರಂದು ಕೊಪ್ಪಳಕ್ಕೆ ಆಗಮಿಸುವರು. ಬೆಳಗ್ಗೆ 11 ಗಂಟೆಗೆ ಪ್ರವಾಸಿ ಮಂದಿರಲ್ಲಿ ಸಮುದಾಯ ಜನರೊಡನೆ ಸಭೆ ನಡೆಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುವಂತೆ ಶ್ರೀ ಸಿದ್ದರಾಮೇಶ್ವರ ಭೋವಿ ಕ್ಷೇಮಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ತಿಳಿಸಿದರು.

ರಾಜ್ಯದಲ್ಲಿ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ನೀಡಲು ಸಮೀೆ ಆರಂಭಿಸಿದೆ. ಈ ಬಗ್ಗೆ ರಾಜ್ಯಾದ್ಯಂತ ಜನ ಜಾಗೃತಿ ಮೂಡಿಸಲಾಗುತ್ತಿದೆ. ಯಾವ ಕಾಲಂನಲ್ಲಿ ಯಾವ ಮಾಹಿತಿ ನಮೂದಿಸಬೇಕೆಂದು ಜನರಿಗೆ ತಿಳಿವಳಿಕೆ ನೀಡಬೇಕಿದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಪ್ರಚಾರ ನಡೆಸಿಲ್ಲ. ಸಮುದಾಯ ಜನರ ಹಿತದೃಷ್ಟಿಯಿಂದ ಸಂಟನೆ ಮೂಲಕ ಅರಿವು ಮೂಡಿಸುತ್ತಿದ್ದೇವೆ. ಶ್ರೀಗಳು ರಾಜ್ಯಾದ್ಯಂತ ಸಂಚರಿಸಿ ಜಾಗೃತಿ ಮಾಡುತ್ತಿದ್ದಾರೆ. ಮೇ 11ರಂದು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಬೇಕು. ಶ್ರೀಗಳು ನೀಡುವ ಮಾಹಿತಿ ತಿಳಿದು, ಇತರರಿಗೆ ತಿಳಿಸಬೇಕು. ಸಮೀೆಯಲ್ಲಿ ಜಾತಿ ಕಾಲಂ ಸೇರಿ ಇತರ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ಒದಗಿಸಬೇಕೆಂದು ಮನವಿ ಮಾಡಿದರು.

ಸಮುದಾಯ ನಾಯಕರಾದ ದುರುಗಪ್ಪ ಕರಮುಡಿ, ವೆಂಕಟೇಶ ಭೋವಿ, ಲಕ್ಷ$್ಮಣ ಪೂಜಾರ, ಹುಲುಗಪ್ಪ ಭೋವಿ, ಸುಂಕಪ್ಪ ಭೋವಿ, ಅರುಣ್​ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net