ಭಾಗ್ಯನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

district koppal bhagyanagara karave protest
Published on

ಕೊಪ್ಪಳ: ಭಾಗ್ಯನಗರದ ಪಪಂನ ಎಲ್ಲ ವಾರ್ಡ್​ಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕರವೇ ಕನ್ನಡಪರ ಸಂಟನೆಗಳ ಒಕ್ಕೂಟ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕೊಪ್ಪಳ-ಭಾಗ್ಯನಗರ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಿವಿಧ ಬಡಾವಣೆಗಲ ಖಾಲಿ ನಿವೇಶನಗಳಲ್ಲಿ ಕಸ ಬೆಳೆದಿದೆ. ನೀರು ಸಂಗ್ರಹವಾಗಿ ಸೊಳ್ಳೆ ಹೆಚ್ಚಿವೆ. ಜನರಿಗೆ ರೋಗ ಭೀತಿ ಎದುರಾಗಿದೆ. ಚರಂಡಿಗಳು ವೈಜ್ಞಾನಿಕವಾಗಿಲ್ಲ. ಸಿಸಿ ರಸ್ತೆಗಳಿಲ್ಲ. ಬೀದಿ ದೀಪಗಳ ನಿರ್ವಹಣೆ ಇಲ್ಲ. ಸ್ವಚ್ಛತೆ ಮರೆಯಾಗಿದೆ ಎಂದು ಆರೋಪಿಸಿದರು.

ತಕ್ಷಣ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸಬೇಕು. ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಟ್ಟಣದ ಆಂಜನೇಯ ದೇವಸ್ಥಾನದಿಂದ ಪಪಂ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿದರು.

ಸಂಟನೆ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ, ಭಾಗ್ಯನಗರ ಅಧ್ಯಕ್ಷ ವೀರೇಶ ಮುಂಡಾಸದ, ಉಪಾಧ್ಯಕ್ಷ ದೇವೇಂದ್ರಪ್ಪ ಅಲಬಗಾನೂರು, ಸಂಘಟನಾ ಕಾರ್ಯದರ್ಶಿ ಪ್ರಕಾಶ ಜೋಶಿ, ಮುಖಂಡರಾದ ಸಂಜೀವಸಿಂಗ್​ ಅಜಾರೆ, ಹನುಮಂತ ಜೀರಾಳ, ವೆಂಕಟೇಶ ತಟ್ಟಿ, ನೂರಬಾಷಾ, ದೊಡ್ಡಬಸಪ್ಪ ನರೇಗಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net