ಭಾಗ್ಯನಗರದಲ್ಲಿ ಕಾಲೇಜು ಆರಂಭಕ್ಕೆ ಪರಿಶೀಲನೆ

district koppal bhagyanagara degree collage team visit
Published on

ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಸರ್ಕಾರಿ ಪದವಿ ಕಾಲೇಜು ಆರಂಭಕ್ಕೆ ಬೇಕಾದ ಸೌಕರ್ಯಗಳನ್ನು ಶುಕ್ರವಾರ ಪರಿಶೀಲಿಸಿತು.

ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಿಸುವಂತೆ ಜನರು ಬೇಡಿಕೆ ಸಲ್ಲಿಸಿದ್ದರು, ಈ ಬೆನ್ನಲ್ಲೇ ಆಗಮಿಸಿದ ಅಧಿಕಾರಿಗಳು ಜಾಗ ಸೇರಿ ಇತರ ಸೌಕರ್ಯ ಪರಿಶೀಲಿಸಿದರು. ಕೊಪ್ಪಳ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಹನುಮಂತ ನಾಯಕ ದೊಡ್ಮನಿ, ಉಪನ್ಯಾಸಕ ಶಿವನಾಥ್​ ಇ.ಜಿ. ನಿಯೋಗ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿತು. ಪಿಯು ಪ್ರಾಚಾರ್ಯ ರಾಜಶೇಖರ ಪಾಟೀಲ್​ ಪದವಿ ಕಾಲೇಜು ಆರಂಭಕ್ಕೆ ಬೇಕಾದ ಸೌಲಭ್ಯಗಳಿರುವ ಬಗ್ಗೆ ಮನವರಿಕೆ ಮಾಡಿದರು. ಕೊಠಡಿ, ಮೈದಾನ, ಶೌಚಗೃಹ, ಕುಡಿವ ನೀರು ಮಾಹಿತಿ ನೀಡಿದರು. ಅಗತ್ಯ ಬಿದ್ದಲ್ಲಿ ನಿಷ್ಕ್ರಿಯವಾಗಿರುವ ಪವರ್​ಲೂಮ್​ ನೇಕಾರರ ಸಹಕಾರ ಉತ್ಪಾದಕ ಮತ್ತು ಮಾರಾಟ ನಿಯಮಿತ ಸಂಸ್ಥೆ ಕಟ್ಟಡಗಳಿದ್ದು ಬಳಸಿಕೊಳ್ಳಲು ಇರುವ ಅವಕಾಶ ತಿಳಿಸಿದರು.

ಭಾಗ್ಯನಗರ ಸರ್ಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಪಟ್ಟಣ ಪಂಚಾಯತ್​ ಉಪಾಧ್ಯಕ್ಷ ಹೊನ್ನೂರಸಾಬ್​ ಬೈರಾಪುರ, ಪ್ರಮುಖರಾದ ಶಿವರಾಮ್​ ಮೇಗಳಮನಿ, ಮೋಹನ್​ ಅರಕಲ್​, ಕೃಷ್ಣಾ ಇಟ್ಟಂಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net