ಬೇವೂರು ವಸತಿ ಶಾಲೆ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

district koppal bevoor hostel students wins prize in state level HIV compitation
students wins prize in state level HIV compitation
ರಾಜ್ಯಮಟ್ಟದ ಎಚ್​ಐವಿ/ಏಡ್ಸ್​ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೇವೂರಿನ ವಿದ್ಯಾರ್ಥಿನಿಯರಾದ ಸಂಗಮೇಶ್ವರಿ, ಪ್ರಿಯಾಂಕ. ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.
Published on

ಕೊಪ್ಪಳ: ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಡಿ.18ರಂದು ನಡೆದ ರಾಜ್ಯ ಮಟ್ಟದ ಎಚ್​.ಐ.ವಿ/ಏಡ್ಸ್​ ರಸಪ್ರಶ್ನೆ ಸ್ಪರ್ಧೆಯಲ್ಲಿ ಯಲಬುರ್ಗಾ ತಾಲೂಕು ಬೇವೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ(ಬಿಸಿ-378) ವಿದ್ಯಾರ್ಥಿನಿಯರಾದ ಸಂಗಮೇಶ್ವರಿ ಹಾಗೂ ಪ್ರಿಯಾಂಕಾ ಪ್ರಥಮ ಸ್ಥಾನ ಪಡೆದು, ಡಿ.21 ರಂದು ಮುಂಬೈನಲ್ಲಿ ನಡೆವ ವಿಭಾಗೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯರಿಗೆ 15,000 ರೂ.ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.

ಒಟ್ಟು 18 ಸುತ್ತುಗಳಲ್ಲಿ ನಡೆದ ಸ್ಫರ್ಧೆಯಲ್ಲಿ ಅತ್ಯುತ್ತಮ 6 ಜಿಲ್ಲೆಗಳನ್ನು ಆಯ್ಕೆ ಮಾಡಿ ಅಂತಿಮ ಹಂತದಲ್ಲಿ ಋಣಾತ್ಮಕ ಅಂಕಗಳೊಂದಿಗೆ ಸ್ಪರ್ಧೆ ನಡೆಸಲಾಯಿತು. ಎಲ್ಲ ಹಂತದಲ್ಲೂ ಜಿಲ್ಲೆಯ ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಾಚಾಯೆರ್ ನಾಗಲಕ್ಷಿ$್ಮ ಮಿಸ್ಕಿನ್​, ಡಿಎಚ್​ಒ ಡಾ.ಟಿ.ಲಿಂಗರಾಜು, ಜಿಲ್ಲಾ ಏಡ್ಸ್​ ನಿಯಂತ್ರಣ ಅಧಿಕಾರಿ ಡಾ.ಶಶಿಧರ ಎ. ಇತರರು ಶ್ಲಾನೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net