

ಕೊಪ್ಪಳ: ಸಂಟನೆಗಳು ಸದಸ್ಯ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಬಿಇಒ ಹನುಮಂತಪ್ಪ ಕಿವಿ ಮಾತು ಹೇಳಿದರು.
ನಗರದ ವಿಜ್ಞಾನ ಭವನದಲ್ಲಿ ಶಿಕ್ಷಣ ಇಲಾಖೆ ಲಿಪಿಕ ಸಿಬ್ಬಂದಿ, ವಾಹನ ಚಾಲಕ ಹಾಗೂ ಡಿ ದರ್ಜೆ ನೌಕರರ ಸಂದಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಂ, ಸಂಟನೆ ಕಟ್ಟುವಿಕೆ ಸುಲಭ. ಅದನ್ನು ಮುನ್ನಡೆಸುವುದು ಕಷ್ಟದ ಕೆಲಸ. ಸಂಟನೆ ಜತೆಗೆ ಸದಸ್ಯರ ಬೇಡಿಕೆ ಈಡೇರಿಸಬೇಕು. ಸಮಸ್ಯೆಗಳಾದಲ್ಲಿ ತಕ್ಷಣ ಸ್ಪಂದಿಸುವ ಕಾರ್ಯವಾಗಲಿ. ಆಗ ಸಂಟನೆ ಕಟ್ಟಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.
ವಿಕಲಚೇತನ ನೌಕರರ ಸಂದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಸೌಲಭ್ಯ ಪಡೆಯಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಸಂಟನೆಯಿಂದ ಮಾತ್ರ ಸಾಧ್ಯ. ಸಂ ರಚನೆಯಾಗಿ ಹಲವು ವರ್ಷಗಳಾದರೂ ಸಂಟನೆ ಬಲವಾಗಿಲ್ಲ. ಇನ್ನು ಮುಂದಾದರೂ ಬಲವಾಗಲಿ. ಕಾರ್ಯಾಗಾರ ಹಮ್ಮಿಕೊಂಡಿದ್ದ ಶ್ಲಾನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂದ ಜಿಲ್ಲಾಧ್ಯಕ್ಷ ಅಯ್ಯಣ್ಣ ಮರದೂರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಿಪಿಕ ನೌಕರ ಯಲ್ಲಾಲಿಂಗ ಎಚ್ಆರ್ಎಂಎಸ್&2 ಕುರಿತು ಉಪನ್ಯಾಸ ನೀಡಿದರು. ಲಿಪಿಕ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆದೇಪ್ಪ, ಡಯಟ್ ಉಪನ್ಯಾಸಕ ಗವಿಸಿದ್ದಯ್ಯ ಬೆಣಕಲ್ಲಮಠ, ನಿವೃತ್ತ ಡಿಡಿಪಿಐ ಬಿ.ಎಸ್.ಪಟ್ಟಣ್ಣಶೆಟ್ಟಿ, ಪತ್ರಾಂಕಿತ ಅಧಿಕಾರಿ ಪ್ರಾಣೇಶ ಆಚಾರ್ಯ, ರಾಯಚೂರು ಜಿಲ್ಲಾಧ್ಯಕ್ಷರಾದ ಇಮ್ಯಾನಿವೆಲ್, ವ್ಯವಸ್ಥಾಪಕ ಸೋಖಶೇಖರ ಇತರರಿದ್ದರು.