

ಕೊಪ್ಪಳ: ಕಾಂತರಾಜ್ ಆಯೋಗ ವರದಿ ಅವೈಜ್ಞಾನಿಕವಾಗಿದೆ. ಉದ್ದೇಶಪೂರ್ವಕವಾಗಿ ಲಿಂಗಾಯತರು, ಒಕ್ಕಲಿಗರ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಲಿಂಗಾಯತ ಶಾಸಕರೂ ಈಗಲಾದರೂ ಒಟ್ಟಾಗಿ ವರದಿ ಜಾರಿ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂತ ಸ್ವಾಮೀಜಿ ಒತ್ತಾಯಿಸಿದರು.
ಗಂಗಾವತಿ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ವರದಿ ಲಿಂಗಾಯತರಿಗೆ ಮರಣ ಶಾಸನದಂತಿದೆ. ಅಧಿಕಾರ ಶಾಶ್ವತ ಅಲ್ಲ. ಲಿಂಗಾಯತ ಸಚಿವ, ಶಾಸಕರು ರಾಜೀನಾಮೆ ಅಸ್ತ್ರ ಪ್ರಯೋಗಿಸಲಿ. ಒಳ ಪಂಗಡ ಮರೆತು ಒಟ್ಟಾಗಿ. ಒಕ್ಕಲಿಗರೊಂದಿಗೆ ಸಭೆ ನಡೆಸಿ. ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರು ಪ್ರಬಲರು. ಸಮೀೆ ಮೂಲಕ ನಮ್ಮ ಸ್ವಾಭಿಮಾನ ಕುಗ್ಗಿಸುವ ಕೆಲಸ ನಡೆದಿದೆ. ಸರಿಯಾಗಿ ಗಣತಿ ನಡೆದಿಲ್ಲ. 10 ವರ್ಷದ ಹಿಂದಿನ ವರದಿ ಒಪ್ಪಲಾಗದು. ಬೇಕೆಂದೇ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಕ್ಯಾಬಿನೆಟ್ನಲ್ಲಿ ಚರ್ಚಿಸುವ ಸಾಹಸ ಬಿಟ್ಟು ಸಿಎಂ ತಕ್ಷಣ ವರದಿ ತಿರಸ್ಕರಿಸಬೇಕೆಂದು ಆಗ್ರಹಿಸಿದರು.
ಯಾವ ಸಮುದಾಯಕ್ಕೂ ಅನ್ಯಾಯ ಆಗಬಾರದು. ಪ್ರಮಾಣಿಕವಾಗಿ ವರದಿ ಸಿದ್ಧಪಡಿಸಲಿ. ಸಮೀೆ ನಡೆಸಿ ಅದನ್ನೇ ಗಣತಿ ಎಂದು ತಪು$್ಪದಾರಿಗೆ ಎಳೆಯಲಾಗುತ್ತಿದೆ. ನಾಡಿನ ಎಲ್ಲ ಮಠಾಧೀಶಯರು ವರದಿ ವಿರೋಧಿಸಿದ್ದಾರೆ. ಎಲ್ಲ ಸಮುದಾಯಗಳು ಮಾಧ್ಯಮ ವರದಿ ನೋಡಿ ನೊಂದಿವೆ. ರಾಜ್ಯ ಸರ್ಕಾರ ಗಣತಿ ನಡೆಸಲು ಬರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ವಿರೋಧ ಮೀರಿ ಜಾರಿ ಮಾಡಿದಲ್ಲಿ ಸರ್ಕಾರಕ್ಕೆ ಧಕ್ಕೆಯಾಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದರು.