ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಸಮೀೆ ನಡೆಸುವುದು ಅಗತ್ಯವಿಲ್ಲ. ಕೇಂದ್ರ ಸರ್ಕಾರ ಜನ ಗಣತಿ ಜತೆಗೆ ಜಾತಿ ಗಣತಿ ನಡೆಸುವುದಾಗಿ ತಿಳಿಸಿದ್ದು, ಅದೇ ವರದಿ ಆಧರಿಸಿ ಮೀಸಲು ಹಂಚಿಕೆ ಮಾಡಲಿ ಎಂದು ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಅಧ್ಯಕ್ಷ ಎಸ್.ಆರ್.ರಾಜಾನಾಯ್ಕ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಧೀಶ ನಾಗಮೋಹನದಾಸ್ ಆಯೋಗ ಪಜಾಯ ವಿವಿಧ ಜಾತಿಗಳ ಸ್ಥಿತಿ&ಗತಿ ಅಧ್ಯಯನಕ್ಕೆ ಮುಂದಾಗಿದೆ. ಆದರೆ ಸಮೀೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಕೇವಲ 15&20ದಿನದಲ್ಲಿ ರಾಜ್ಯಾದ್ಯಂತ ಸಮೀೆ ನಡೆಸುವುದಾಗಿ ಹೇಳುತ್ತಿದ್ದಾರೆ. ಶಿಕ್ಷಕರ ಮೂಲಕ ಮಾಡಲು ಮುಂದಾಗಿದ್ದಾರೆ. ಆದರೆ, ನಮ್ಮದು ಅಲೆಮಾರಿ ಸಮುದಾಯ. ಈ ಅವಧಿಯಲ್ಲಿ ಬೇರೆಡೆ ಉದ್ಯೋಗ ಅರಿಸಿ ನಮ್ಮ ಜನ ತೆರಳಿರುತ್ತಾರೆ. ಇದರಿಂದ ಅವರೆಲ್ಲ ಸಮೀೆಯಿಂದ ಬಿಟ್ಟು ಹೋಗುವ ಆತಂಕವಿದೆ ಎಂದರು.
ವೈಯಕ್ತವಾಗಿ ಒಬ್ಬೊಬ್ಬರ ಸಾಮಾಜಿಕ, ಶೈಕ್ಷಣಿ, ಔದ್ಯೋಗಕ, ಆರ್ಥಿಕ ಸ್ಥಿತಿ ಅರಿಯಲು ಸಮೀೆ ನಡೆಸಲಾಗುತ್ತಿದೆ. ಹೀಗಾಗಿ ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ. 2011ರ ಜನ ಗಣತಿಯಲ್ಲೂ ನಮಗೆ ಅನ್ಯಾಯವಾಗಿದೆ. ಕೇವಲ 12.5 ಲಕ್ಷ ಜನಸಂಖ್ಯೆ ಇದೆ ಎಂದು ತಿಳಿಸಿದ್ದಾರೆ. ವಾಸ್ತವವಾಗಿ 35&40 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮಾಡುವ ಜಾತಿ, ಜನಗಣತಿ ಅಂಕಿಅಂಶಗಳನ್ನ ಆಧರಿಸಿ ಒಳ ಮೀಸಲು ನೀಡಬೇಕು. ಸಿಎಂ ಸಹ ಕೇಂದ್ರ ಗಣತಿ ಮಾಡುವ ವಿಷಯ ಸ್ವಾಗತಿಸಿದ್ದು ನಮ್ಮ ಮನವಿಯನ್ನೂ ಪುರಸ್ಕರಿಸಬೇಕೆಂದು ಮನವಿ ಮಾಡಿದರು.
ಸಮಿತಿ ಸಂಚಾಲಕರಾದ ಪಿ.ಲಕ್ಷ$್ಮಣ ನಾಯ್ಕ, ಗಂಗಾನಾಯ್ಕ ಗೊಂದಿ, ಕೆ.ಪಿ.ರೂಪನಾಯ್ಕ, ರವಿಕಾಂತ ಆರ್.ಅಂಗಡಿ ಇತರರಿದ್ದರು.