ಕೊಪ್ಪಳ‌ ಬಂದ್ ಗೆ ವಿವಿಧ ಮಠಾಧೀಶರಿಗೆ ಆಹ್ವಾನ

IMG-20250220-WA0028
Published on

ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆ ವಿರೋಧಿಸಿ ಕೊಪ್ಪಳ ತಾಲುಕ ಹಿತರಕ್ಷಣಾ ವೇದಿಕೆ ಕರೆ ನೀಡಿರುವ ೆ.24ರ ಬಂದ್ಗೆ ಬೆಂಬಲ ಕೋರಿ ಗುರುವಾರ ವಿವಿಧ ಮಠಾಧೀಶರಿಗೆ ಮನವಿ ಸಲ್ಲಿಸಲಾಯಿತು.

ಗವಿಶ್ರೀಗಳ ಅಣತಿಯಂತೆ ಸರ್ವಧರ್ಮದವರನ್ನು ಒಳಗೊಂಡು ಹೋರಾಟ ರೂಪಿಸಲು ಯೋಜಿಸಿದ್ದು, ಕೊಪ್ಪಳ ತಾಲೂಕು ವ್ಯಾಪ್ತಿಯ ವಿವಿಧ ಮಠಾಧೀಶರಿಗೆ ಗುರುವಾರ ೆ.24ರ ಬಂದ್ ಅಂಗವಾಗಿ ನಡೆವ ಪ್ರತಿಭಟನೆಯಲ್ಲಿ ಭಾಗಿಯಾಗಲು ಮನವಿ ಸಲ್ಲಿಸಲಾಯಿತು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಬೆಂಬಲ ಘೋಷಿಸಿದ್ದು ಬಂದ್ ದಿನದಂದು ರಜೆ ಘೋಷಿಸುವ ಭರವಸೆ ನೀಡಿವೆ. ಉಳಿದಂತೆ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು, ಪಿಯು ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಗೆ ತೆರಳಿದ ಸಂಚಾಲಕರು ಬಂದ್ಗೆ ಸ್ವಯಂ ಪ್ರೇರಣೆಯಿಂದ ಸ್ಪಂದಿಸಲು ಮನವಿ ಮಾಡಿಕೊಂಡರು. ಗವಿಶ್ರೀಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಬಹುತೇಕರು ಬಂದ್ಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.

ಹೋರಾಟ ಹಿನ್ನೆಲೆಯಲ್ಲಿ ವಾಲ್ಮೀಕಿ ಭವನ ಪಕ್ಕದಲ್ಲಿ ತಾತ್ಕಾಲಿಕವಾಗಿ ಆರಂಭಿಸಿರುವ ಕಚೇರಿಗೆ ಗುರುವಾರ ವಿವಿಧ ಸಂಟನೆಗಳ ಪದಾಧಿಕಾರಿಗಳು ಆಗಮಿಸಿ ಬೆಂಬಲ ಘೋಷಿಸಿದರು. ಬ್ರಾಹ್ಮಣ ಮಹಾಸಭಾ, ದಲಿತಪರ ಸಂಟನೆ ಕರವೇ ಸಂಟನೆಗಳು, ವಿವಿಧ ಸಮುದಾಯ ಸಂಟನೆಗಳ ಮುಖಂಡರು ಭೇಟಿ ನೀಡಿ ಒಪ್ಪಿಗೆ ಪತ್ರ ನೀಡಿ ತೆರಳಿದರು. ಐದು ಆಟೋಗಳಲ್ಲಿ ಬಂದ್ ಆಚರಣೆ ಕುರಿತು ಮಾಹಿತಿ ನೀಡಲು ಗುರುವಾರ ಚಾಲನೆ ನೀಡಲಾಯಿತು. ಕೊಪ್ಪಳ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ಮೂರು ದಿನಗಳ ಕಾಲ ನಿರಂತರ ಪ್ರಚಾರ ಕೈಗೊಳ್ಳುವುದಾಗಿ ಸಂಚಾಲಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net