

ಕೊಪ್ಪಳ: ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ೆ.24 (ಸೋಮವಾರ) ಬಂದ್ಗೆ ಕರೆ ಕೊಟ್ಟಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಇರಲಿದೆ.
ಬೆಳಗ್ಗೆ 9 ಗಂಟೆಗೆ ಗವಿಮಠ ಆವರಣದಿಂದ ಜಾಥಾ ಆರಂಭವಾಗಲಿದೆ. ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತ ಮಾರ್ಗವಾಗಿ ತಾಲೂಕು ಕ್ರೀಡಾಂಗಣ ತಲುಪುವುದು. ದಾರಿಯುದ್ದಕ್ಕೂ ಕುಡಿವ ನೀರು, ಮಜ್ಜಿಗೆ, ಜ್ಯೂಸ್ ಸೇವೆ ಇರಲಿದೆ. ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಇರಲಿದೆ. ಗವಿಶ್ರೀಗಳು ಸೇರಿದಂತೆ ಪ್ರಮುಖರು ಜನರನ್ನು ಉದ್ದೇಶಿಸಿ ಮಾತನಾಡುವರು. ಆಗಮಿಸಿದವರಿಗೆ ತಾಲೂಕು ಕ್ರೀಡಾಂಗಣದಲ್ಲೇ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರಿಗೆ ಸೇವೆ ಬೈಪಾಸ್ವರೆಗೆ ಇರಲಿದೆ. ನಗರದ ಒಳಭಾಗದಲ್ಲಿ ವಾಹನಗಳ ಓಡಾಟ ಇರುವುದಿಲ್ಲ. 100ಕ್ಕೂ ಹೆಚ್ಚು ಸಂಟನೆಗಳು ಬಂದ್ ಬೆಂಬಲಿಸಿದ್ದು, ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ (ಒಪಿಡಿ)ಸೇವೆ ಸ್ಥಗಿತವಾಗಲಿದೆ. ಖಾಸಗಿ ಶಾಲೆಗಳು ರಜೆ ಘೋಷಿಸಿದ್ದು, ವರ್ತಕರು, ವ್ಯಾಪಾರಿಗಳು, ಹೋಟೆಲ್ಗಳು, ಪೆಟ್ರೋಲ್ ಬಂಕ್ ಸೇರಿ ಬಹುತೇಕ ಸೇವೆಗಳು ಬಂದ್ ಇರಲಿವೆ.