ಕೊಪ್ಪಳ: ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪನೆಯಿಂದ ಜನ&ಜಾನುವಾರುಗಳಿಗೆ ಸಮಸ್ಯೆ ಆಗಲಿದೆ. ಇದರಿಂದ ಕಾರ್ಖಾನೆ ವಿರೋಧಿಸಿ ೆ.24ರಂದು ಕರೆ ನೀಡುರುವ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಕಾರ್ಖಾನೆ ಬೇರೆಡೆ ಸ್ಥಳಾಂತರಿಸಬೇಕೆಂಬುದಕ್ಕೆ ನನ್ನ ಸಹಮತವಿದೆ. ಗವಿಶ್ರೀಗಳ ನೇತೃತ್ವದಲ್ಲಿ ಬಂದ್ಗೆ ಕರೆ ನೀಡಿದ್ದು ನನ್ನ ಸಂಪೂರ್ಣ ಬೆಂಬಲಿವಿದೆ. ನಾನು ಬಂದ್ನಲ್ಲಿ ಭಾಗವಹಿಸಲಿದ್ದು, ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸುವೆ. ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಜತೆಗೂಡಿ ಸಿಎಂ ಸಿದ್ದರಾಮಯ್ಯಗೆ ಕಾರ್ಖಾನೆ ಸ್ಥಳಾಂತರಕ್ಕೆ ಒತ್ತಾಯಿಸುವೆ. ಬಂದ್ ಯಶಸ್ವಿಯಾಗಲೆಂದು ತಿಳಿಸಿದ್ದಾರೆ.