ಜಾಗೃತಿ ವಿಚಾರ ಸಂಕಿರಣ 22ರಂದು

district koppal band allamaprabhu bettadooru
Published on

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಬಿಎಸ್ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ೆ.22ರಂದು ಸಾಹಿತ್ಯ ಭವನದಲ್ಲಿ ಜಾಗೃತಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ಈಗಿರುವ ಕಾರ್ಖಾನೆಗಳಿಂದ ಹೊರ ಬರುವ ವಿಷಗಾಳಿ, ಧೂಳಿನಿಂದ ಅನೇಕ ದುಷ್ಪರಿಣಾಮಗಳಾಗುತ್ತಿವೆ. ಈ ಬಗ್ಗೆ ನಮ್ಮ ಸಮಿತಿಯಿಂದ ಜನಾಂದೋಲನ ಮಾಡುತ್ತಿದ್ದೇವೆ. ಅದರ ಭಾಗವಾಗಿ ಪರಿಸರ ಬರಹಗಾರ ನಾಗೇಶ ಹೆಗಡೆ ಹಾಗೂ ಕೃಷಿ ತಜ್ಞ ಹೇಮಂತ ರಾವಡಗಿ ಅವರಿಂದ ವಿಚಾರ ಸಂಕಿರಣ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅಂದು ಬೆಳಗ್ಗೆ 10 ಗಂಟೆಗೆ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಇರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರ ಜನವಿರೋಧಿ ನಡೆ ಕೈ ಬಿಡಬೇಕು. ಅಣು ಸ್ಥಾವರ ಆರಂಭಕ್ಕೆ ಜಾಗ ಪರಿಶೀಲನೆಯನ್ನೂ ಕೈ ಬಿಡಬೇಕು. ಹೊಸ ಬಿಎಸ್ಪಿಎಲ್ ಕಾರ್ಖಾನೆ ಆರಂಭಕ್ಕೆ ಅನುಮತಿ ನೀಡಬಾರದು. ಜನರ ಆರೋಗ್ಯ ಕಸಿಯುವ ಕಾರ್ಖಾನೆಗಳ ಬದಲು ಪರ್ಯಾಯ ಉದ್ಯೋಗ ಸೃಷ್ಟಿಸಲಿ. ಸೋಲಾರ್ ವಿದ್ಯುತ್ ಉತ್ಪಾದಿಸಲಿ. ಬಾಧಿತ ಪ್ರದೇಶಗಳಲ್ಲಿ ಸಮೀೆ ನಡೆಸಬೇಕು. ಗವಿಸಿದ್ದೇಶ್ವರ ಸ್ವಾಮೀಜಿಗಳು ಅಣು ಸ್ಥಾವರ ಸ್ಥಾಪನೆ ವಿರುದ್ಧವೂ ಹೋರಾಟಡಲಿ ಎಂದರು.

ಹೋರಾಟಗಾರ ಬಸವರಾಜ ಸೂಳಿಭಾವಿ ಮಾತನಾಡಿ, ಜನರು ಆರೋಗ್ಯ ಕಳೆದುಕೊಂಡು ಜೀವನ ಸಾಗಿಸುವಂತಾಗಿದೆ. ಯಾರ ಗಮನಕ್ಕೂ ಬಾರದಂತೆ ಕಾರ್ಖಾನೆಗಳು ಭೂಮಿ ಪಡೆದಿವೆ. ಕಳೆದೆರೆಡು ದಶಕದಿಂದ ಹೋರಾಟ ನಡೆಯತ್ತಿದೆ. ಈ ಬಾರಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಜನರು ಇದಕ್ಕೆ ಸ್ಪಂದಿಸಬೇಕು ಎಂದು ಕರೆ ನೀಡಿದರು.

ಡಿ.ಎಚ್. ಪೂಜಾರ ಮಾತನಾಡಿ, ಶಾಸಕ ಹಿಟ್ನಾಲ ಸಹ ಹೋರಾಟ ಬೆಂಬಲಿಸಿದ್ದು ಸ್ವಾಗತಾರ್ಹ. ಇಷ್ಟೆಲ್ಲ ವಿರೋಧದ ನಡುವೆಯೂ ಕಾರ್ಖಾನೆ ಆರಂಭಿಸಿದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಬೇಕು. ಆಗ ಮಾತ್ರ ಅವರ ಬದ್ಧತೆ ಬಗ್ಗೆ ವಿಶ್ವಾಸ ಮೂಡಲಿದೆ ಎಂದು ಸವಾಲು ಹಾಕಿದರು. ಬೆಂಬಲಿಗರಾದ ಜ್ಯೋತಿ ಗೊಂಡಬಾಳ ಹಾಗೂ ಕಾಶಪ್ಪ ಚಲುವಾದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net