ಬನಶಂಕರಿ ಜಾತ್ರೆ ಅದ್ದೂರಿ

district koppal banashankari jaathra bagyanagara tp
Published on

ಕೊಪ್ಪಳ: ತಾಲೂಕಿನ ಭಾಗ್ಯನಗರದಲ್ಲಿ ದೇವಾಂಗ ಸಮಾಜದ ನೇತೃತ್ವದಲ್ಲಿ ಬುಧವಾರ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ನೆರವೇರಿತು. ಸಂಜೆ ಅಪಾರ ಭಕ್ತಗಣದೊಂದಿಗೆ ರಥೋತ್ಸವ ಜರುಗಿತು.

ಭಕ್ತರು ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು. ತೇರು ಸಾಗುತ್ತಲೇ "ಶಂಭೂಕಾ', 'ಬನಶಂಕರಿ ದೇವಿಗೆ ಜಯವಾಗಲಿ' ಎಂಬ ಘೋಷಣೆ ಹಾಕಿದರು. ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಬನಶಂಕರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ಪೂಜೆ, ಹೋಮ&ಹವನ ನೆರವೇರಿದವು. ದೇವಸ್ಥಾನಿಂದ ಅಂಬೇಡ್ಕರ್​ ವೃತ್ತವರೆಗೆ ರಥ ಸಾಗಿತು. ಪಾದಗಟ್ಟಿಯಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮರಳಿ ಮೂಲ ಸ್ಥಳಕ್ಕೆ ಧಾವಿಸಿತು.

ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ದೇವಾಂಗ ಸಮುದಾಯ ಅಧ್ಯಕ್ಷ ಚಂದ್ರು ಬೆಟಗೇರಿ, ಉಪಾಧ್ಯಕ್ಷ ಮಂಜುನಾಥ ಜಲ್ಲಿ, ಸುರೇಶ ಮೂರಂಕಣದ, ಮುಖಂಡರಾದ ಶಂಕ್ರಪ್ಪ ಬೆಟಗೇರಿ, ಮಂಜುನಾಥ ಬಣ್ಣದ, ಮಂಜುನಾಥ ಗಡಾದ, ರವಿಕುಮಾರ ಬೆಟಗೇರಿ, ಕೃಷ್ಣ ಕುದರಿ, ದಕ್ಷಿಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net