ಸೌಹಾರ್ದತೆಯಿಂದ ಹಬ್ಬ ಆಚರಿಸಿ, ಡಿಸಿ ನಲಿನ್​ ಅತುಲ್​ ಮನವಿ

district koppal bakrid festival celebration peace meet
Published on

ಕೊಪ್ಪಳ: ಜಿಲ್ಲಾದ್ಯಂತ ಜೂ.7ರಂದು ಬಕ್ರೀದ್​ ಹಬ್ಬವಿದ್ದು ಶಾಂತಿ, ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಮನವಿ ಮಾಡಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹಬ್ಬಗಳು ನಮ್ಮ ಸಂಭ್ರಮ ಹೆಚ್ಚಿಸಬೇಕು. ಕೋಮು ಸಂರ್ಷಕ್ಕೆ ದಾರಿಯಾಗಬಾರದು. ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಪೊಲೀಸರು ಕಟ್ಟೆಚ್ಚರವಹಿಸಿ. ಬಕ್ರೀದ್​ ಹಬ್ಬ ಶಾಂತಿಯುತ ಆಚರಣೆಗೆ ಎಲ್ಲರೂ ಸಹಕರಿಸಿ. ನಾನು ಜಿಲ್ಲೆಗೆ ಬಂದಾಗಿನಿಂದ ಈವರೆಗೆ ಯಾವುದೇ ಅಹಿತಕರ ಟನೆಗಳು ನಡೆದಿಲ್ಲ. ಮುಂದೆಯೂ ನಡೆಯಬಾರದು. ಎಲ್ಲರೂ ಶಾಂತಿಯಿಂದ ಸಹಬಾಳ್ವೆ ನಡೆಸಬೇಕು. ಮುಖಂಡರು ಈ ಬಗ್ಗೆ ಗಮನ ನೀಡಿ. ಎಲ್ಲರಿಗೂ ಮುಂಚಿತವಾಗಿ ಬಕ್ರೀದ್​ ಶುಭಾಶಯಗಳು ಎಂದು ತಿಳಿಸಿದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಮಾತನಾಡಿ, ಪ್ರತಿ ವರ್ಷದಂತೆ ಈವರ್ಷವೂ ಶಾಂತಿಯಿಂದ ಹಬ್ಬ ಆಚರಿಸೋಣ. ಕೋಮು ಗಲಭೆಗೆ ಅವಕಾಶ ನೀಡದೇ ಎಲ್ಲರೂ ನಮ್ಮೊಂದಿಗೆ ಸಹಕರಿಸಿ. ಮುಸ್ಲಿ ಸಮುದಾಯ ಮುಖಂಡರು ಯುವಕರು, ಸಮುದಾಯದ ಜನರಿಗೆ ತಿಳಿವಳಿಕೆ ಮೂಡಿಸಿ. ಪ್ರಾಣಿ ವಧೆ, ಅಕ್ರಮ ಸಾಗಣೆ ಮೇಲೆ ನಿಗಾವಹಿಸಲು ಜಿಲ್ಲೆಯಲ್ಲಿ 16 ಕಡೆ ಚೆಕ್​ಪೋಸ್ಟ್​ ರಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಶಾಂತಿ ಕದಡುವ ಸಂದೇಶಗಳು ಬಂದಲ್ಲಿ ನಮಗೆ ಮಾಹಿತಿ ನೀಡಿ. ರೌಡಿ ಶೀಟರ್​ಗಳ ಪರೇಡ್​ ನಡೆಸಿ ಎಚ್ಚರಿಕೆ ನೀಡಿದ್ದೇವೆ. ಜೂ.6ರಿಂದಲೇ ನಮ್ಮ ಅಧಿಕಾರಿಗಳು ಗಸ್ತು ತಿರುಗುತ್ತಾರೆ. ಎಲ್ಲ ಠಾಣೆ ಹಂತಗಳಲ್ಲಿ ಸಭೆ ನಡೆಸಿದ್ದೇವೆ. ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಿಸಿ ಎಂದು ಮನವಿ ಮಾಡಿದರು.

ಮುಸ್ಲಿಮ್​ ಮುಖಂಡರು ಮಾತನಾಡಿ, ಬೆಳಗ್ಗೆ 9ರಿಂದ 10 ಗಂಟೆವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತೇವೆ. ಕಳೆದ ವರ್ಷ ಶಾಂತಿಯಿಂದ ಹಬ್ಬ ಆಚರಿಸಿದ್ದೇವೆ. ಈ ವರ್ಷವೂ ಶಾಂತಿ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು. ಈದ್ಗಾ ಮೈದಾನದಲ್ಲಿ ಹೆಚ್ಚಿನ ಜನ ಸೇರುವುದರಿಂದ ಸ್ವಚ್ಛತೆ ಸೇರಿ ಇತರ ಸೌಕರ್ಯ ಕಲ್ಪಿಸಿ. ಸರ್ಕಾರದ ಮಾರ್ಗಸೂಚಿ ಅನ್ವಯ ಹಬ್ಬ ಆಚರಿಸಲಾಗುವುದೆಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್​ ಕುಮಾರ್​, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್​, ಮುಸ್ಲಿಮ್​ ಮುಖಂಡರಾದ ಪೀರಾಹುಸೇನ್​ ಹೊಸಳ್ಳಿ, ಎಸ್​.ಬಿ.ಖಾದ್ರಿ, ಸಯ್ಯದ್​ ನಾಸಿರುದ್ದೀನ್​ ಹುಸೇನಿ, ಮಾನ್ವಿ ಪಾಷಾ, ಮಹಮ್ಮದ್​ ರಫಿ, ಮಹಮ್ಮದ್​ ಸಾಬ್​, ಕ್ರುದ್ದೀನ್​ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net