

ಕೊಪ್ಪಳ: ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಸ್ಪೃಶ್ಯತೆ ಆಚರಿಸದಂತೆ ಎಚ್ಚರಿಕೆ ನೀಡಿದರು. ದಲಿತರಿಗೆ ದೇವಾಲಯ, ೌರದ ಅಂಗಡಿ ಪ್ರವೇಶ ಮಾಡಿಸಿ ಶಾಂತಿ ಸಭೆ ನಡೆಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಇರಲಿದೆ. ಯಾರಿಗೂ ತಾರತಮ್ಯ ಮಾಡುವಂತಿಲ್ಲ. ಕೂಡಲೇ ಮುಚ್ಚಿರುವ ಸಲೂನ್ ತೆರೆಯಿರಿ ಎಂದು ತೆಗೆಸಿದರು. ದಲಿತರು ಸೇರಿ ಎಲ್ಲರಿಗೂ ೌರ ಮಾಡಬೇಕು. ಯಾರಿಗೂ ನಿರಾಕರಿಸುವಂತಿಲ್ಲ. ಅಸ್ಪೃಶ್ಯತೆ ಆಚರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ದಲಿತರೊಬ್ಬರಿಗೆ ೌರ ಮಾಡಿಸಿದರು. ಬಳಿಕ ದೇವಾಲಯಕ್ಕೆ ತೆರಳಿ ಎಲ್ಲ ಸಮುದಾಯದ ಜನರು ಪೂಜೆ ಸಲ್ಲಿಸಿದರು. ಸಭೆ ನಡೆಸಿ ಎಚ್ಚರಿಕೆ ನೀಡಿದರು. ಮುಂದೆ ಇಂಥ ಟನೆಗಳು ಮರುಕಳಿಸಿದರೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ, ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಪಿಎಸ್ಐ ಅಶೋಕ ಬೇವೂರು, ಮುಖಂಡರಾದ ಡಿ.ಎಚ್.ಪೂಜಾರ, ಕೆ.ಬಿ.ಗೋನಾಳ, ಮುದುಕಪ್ಪ ಹೊಸಮನಿ ಇತರರಿದ್ದರು.