ಎಲ್ಲ ವರ್ಗದವರಿಗೆ ಕ್ಷೌರ ಮಾಡಲು ಸೂಚನೆ, ಹಲಗೇರಿ ಗ್ರಾಮದಲ್ಲಿ ಶಾಂತಿ ಸಭೆ

district koppal atracity case halageri village
Published on

ಕೊಪ್ಪಳ: ತಾಲೂಕಿನ ಹಲಗೇರಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿಕಾರಣೆ ಬೆನ್ನಲ್ಲೇ ಸೋಮವಾರ ಗ್ರಾಪಂನಿಂದ ಸಭೆ ನಡೆಸಿದ ಅಧಿಕಾರಿಗಳು ಎಲ್ಲ ವರ್ಗದವರಿಗೆ ೌರ ಮಾಡಲು ಸೂಚಿಸಿದರು. ಕಾನೂನು ಕ್ರಮದ ಎಚ್ಚರಿಕೆ ನೀಡಿ ಕ್ಷೌರಿಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು.

ಗ್ರಾಮದಲ್ಲಿ ಕೆಲ ಕ್ಷೌರಿಕರು ಮನೆ ಮುಂದೆ ಕ್ಷೌರ ಮಾಡುತ್ತಾರೆ. ತಮಗೂ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ಕ್ಷೌರಿಕರು ನಿರಾಕರಿಸಿದ್ದಾರೆ. ಈ ಬಗ್ಗೆ ದಲಿತರು ಗ್ರಾಪಂಗೆ ದೂರು ಸಲ್ಲಿಸಿದ್ದಾರೆ. ಮತ್ತೊಂದೆಡೆ ಕ್ಷೌರಿಕರು ಗ್ರಾಪಂನಿಂದ ನಿವೇಶನ ಅಥವಾ ಮಳಿಗೆ ನೀಡುವಂತೆ ಬೇಡಿಕೆ ಸಲ್ಲಿಸಿದರು. ಎಲ್ಲರೂ ಸಮಾನರು. ಯಾರಿಗೂ ಧರ್ಮ, ಜಾತಿ, ಆಚರಣೆ, ಪದ್ಧತಿ ಹೆಸರಿನಲ್ಲಿ ನಿಂದನೆ, ನಿರಾಕರಣೆ, ತಿರಸ್ಕಾರ ಮಾಡುವಂತಿಲ್ಲ. ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಪಂನಿಂದ ಕ್ಷೌರದ ಅಂಗಡಿ ಮಾಡಲು ನಿವೇಶನ, ಇಲ್ಲವೆ ಮಳಿಗೆ ನೀಡಲು ಒಪ್ಪಿಗೆ ಸೂಚಿಸಿದರು. ಇನ್ನು ಮುಂದೆ ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ. ಮಾಡಿದಲ್ಲಿ ಕಾನೂನು ಕ್ರಮ ಎದುರಿಸುವುದಾಗಿ ೌರಿಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಹಾಂತೇಶ ಎಸ್​.ದರಗದ, ಪೊಲೀಸರು ಭೇಟಿ ನೀಡಿ ಕಾನೂನು ತಿಳಿ ಹೇಳಿದರು. ದಲಿತ ಕೇರಿಗೆ ತೆರಳಿ ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾಹಿತಿ ಪಡೆದರು. ಇನ್ನು ಮುಂದೆ ಅಸ್ಪೃಶ್ಯತೆ ಆಚರಿಸಿದಲ್ಲಿ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.

ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಸದಸ್ಯರಾದ ನಾಗರಾಜ ಪಾಲನಕರ, ಸುಭಾಷ ಹೂಗಾರ, ಪ್ರಮುಖರಾದ ಮಂಜುನಾಥ ಮ್ಯಾಗಳಮನಿ, ಶರಣಪ್ಪ ಬಿನ್ನಾಳ, ಹನುಮಂತ ಹಳ್ಳಿಕೇರಿ, ಭೀಮಣ್ಣ ಗುಡ್ಲಾನೂರ, ಹಡಪದ ಸಮುದಾಯ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ಕಾರ್ಯದರ್ಶಿ ದ್ಯಾಮಣ್ಣ ಮಾದಿನೂರ, ಬಸವರಾಜ ಹುಣಸಿಹಾಳ, ಬುಡ್ಡಪ್ಪ ಹಡಪದ, ಶಿವಪ್ಪ ಹಡಪದ, ಗವಿಸಿದ್ದಪ್ಪ ಕಾಟ್ರಳ್ಳಿ, ಪ್ರಕಾಶ ದದೇಗಲ್​, ದೊಡ್ಡನಗೌಡ ಪಾಟೀಲ್​ ಇತರರಿದ್ದರು.

ಗ್ರಾಪಂ ಅಧ್ಯಕ್ಷರ ಸಮ್ಮುಖದಲ್ಲಿ ಗ್ರಾಮದ ಪ್ರಮುಖರು, ಹಡಪದ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರ ಸಭೆ ನಡೆಸಿ ತಿಳಿಹೇಳಿದ್ದೇವೆ. ಎಲ್ಲ ವರ್ಗದವರಿಗೆ ೌರ ಮಾಡುವಂತೆ ಸೂಚಿಸಿದ್ದು, ಅವರೂ ಒಪ್ಪಿದ್ದಾರೆ. ಗ್ರಾಪಂನಿಂದ ಅಂಗಡಿಗೆ ನಿವೇಶನ ಅಥವಾ ಮಳಿಗೆ ಕಲ್ಪಿಸಿಕೊಡಲಾಗುವುದು. - ಪ್ರಕಾಶ ರಾಂಪೂರ. ಪಿಡಿಒ ಹಲಗೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net