ಅಶೋಕ ವೃತ್ತಕ್ಕೆ ಧಕ್ಕೆ

district koppal ashok circle accident
Published on

ಕೊಪ್ಪಳ: ನಗರದ ಅಶೋಕ ವೃತ್ತಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಕೆಳ ಭಾಗದಲ್ಲಿ ಹಾನಿಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರರ ಸವಿ ನೆನಪಿಗಾಗಿ ವೃತ್ತ ನಿರ್ಮಿಸಲಾಗಿದೆ. ಹೋರಾಟಗಾರರ ಹೆಸರು ಹಾಗೂ ವೃತ್ತ ಸ್ಥಾಪನೆ ಉದ್ದೇಶ ಬರೆಯಲಾಗಿದೆ. ಪ್ರಮುಖ ಹೋರಾಟ, ಪ್ರತಿಭಟನೆಗೆ ವೃತ್ತ ವೇದಿಕೆಯಾಗಿದೆ. 2024ರ ಆಗಸ್ಟ್​ನಲ್ಲಿ ವೃತ್ತ ನವೀಕರಣಗೊಳಿಸಲಾಗಿದೆ. ಆದರೆ, ಕಾಮಗಾರಿ ಅರೆಬರೆಯಾಗಿದ್ದು, ಯೋಜನೆಯಂತೆ ಪೂರ್ಣಗೊಂಡಿಲ್ಲ. ಮಂಗಳವಾರ ತಡರಾತ್ರಿ ವಾಹನ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೆಳ ಭಾಗದಲ್ಲಿ ಅಳವಡಿಸಿದ್ದ ಟೈಲ್ಸ್​ ಕಿತ್ತು ಬಂದಿದ್ದು, ಹಾನಿಯುಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net