ಧರಣಿ ಅಂತ್ಯಗೊಳಿಸಿದ ಆಶಾ ಕಾರ್ಯಕರ್ತೆಯರು

district koppal ashaa workers protest step back
Published on

ಕೊಪ್ಪಳ: ವಿವಿಧ ಬೇಡಿಕೆ ಈಡೇರಿಕೆಗೆ ಆಶಾ ಕಾರ್ಯಕರ್ತೆಯರು ಹಮ್ಮಿಕೊಂಡಿದ್ದ ಮೂರು ದಿನದ ಧರಣಿ ಅಂತ್ಯಗೊಳಿಸಿದರು.

ಹೋರಾಟಗಾರರಾದ ಅಲ್ಲಮ ಪ್ರಭು ಬೆಟ್ಟದೂರು, ಭೀಮಸೇನ್​ ಕಲಿಕೇರಿ, ಭರಮನ ಗೌಡ, ಗಂಗರಾಜ ಅಳ್ಳಳ್ಳಿ, ಶಾರದಾ ಗಡ್ಡಿ ಇತರರು ಆಗಮಿಸಿ ಬೆಂಬಲಿಸಿದರು. ಮಧ್ಯಾಹ್ನ ಮಳೆ ನಡುವೆಯೂ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಆಶಾಗಳು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. 10 ಸಾವಿರ ರೂ. ಗೌರವಧನ, ಇಡಿಗಂಟು ಇಡುವಿಕೆ ಸೇರಿ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. ಮೊದಲ ಹಂತದಲ್ಲಿ ಜನಸಂಖ್ಯೆ ಮಿತಿ ಹೆಚ್ಚಿಸಿ ಆಶಾಗಳ ವಜಾಗೊಳಿಸುವ ತೀರ್ಮಾನ ಕೈಬಿಟ್ಟಿರುವುದು ಹೋರಾಟಕ್ಕೆ ಸಂದ ಜಯ ಎಂದರು. ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ಜನರಿಗೆ, ನಗರದಲ್ಲಿ ಗರಿಷ್ಠ 2 ಸಾವಿರ ಜನರಿಗೆ ಒಬ್ಬ ಆಶಾ ಕೆಲಸ ಮಾಡಬೇಕೆಂಬ ಹಳೆಯ ಮಾರ್ಗಸೂಚಿಗೆ ಬದ್ಧವಾಗಿದ್ದು ಸ್ವಾಗತಾರ್ಹ. ಮೌಲ್ಯಮಾಪನದ ಬಗ್ಗೆ ಆತಂಕ ಬೇಡವೆಂದು ಸರ್ಕಾರ ಹೇಳಿದ್ದು ಉತ್ತಮ ನಡೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಪದಾಧಿಕಾರಿಗಳಾದ ಕೌಶಲ್ಯ ದೊಡ್ಡಗೌಡರ, ಶೋಭಾ ಹೂಗಾರ್​, ವಿಜಯಲಕ್ಷಿ$್ಮ ಆಚಾರ್​, ಅನ್ನಪೂರ್ಣ, ಶಿವಮ್ಮ, ಜ್ಯೋತಿ ಲಕ್ಷಿ$್ಮ, ಶಬಾನ ಹುಲಿಗಿ, ದೀಪ, ಲಾಲ್​ ಬಿ., ಅಂಜಿನಮ್ಮ, ಶಾರದಾ, ಗೀತಾ, ಸಂಗೀತ, ರೇಖಾ, ಲಲಿತ ಹಿರೇಮಠ, ತಿಪ್ಪಮ್ಮ, ರಜಿಯಾ ಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net