

ಕೊಪ್ಪಳ : ಗೌರವ ಧನ ಹೆಚ್ಚಳ ಸೇರಿ ಇತರ ಬೇಡಿಕೆ ಈಡೇರಿಸುವಂತೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ಜಿಲ್ಲಾ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹಗಲಿರುಳು ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ರಾಜ್ಯಾದ್ಯಂತ 42 ಸಾವಿರ ಆಶಾಗಳಿದ್ದೇವೆ. ಗ್ರಾಮೀಣ, ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್ನಲ್ಲೂ ಸಾವಿಗೂ ಲೆಕ್ಕಿಸದೇ ಸೇವೆ ಸಲ್ಲಿಸಿದ್ದೇವೆ. ಅಸಹಾಯಕರು, ವಿಧವೆಯರು, ವಿಚ್ಛೇಧಿತರನ್ನು ಆದ್ಯತೆ ಮೇರೆಗೆ ನೇಮಿಸಿಕೊಂಡು ಸ್ವಾವಂಬಿಗಳನ್ನಾಗಿಸಲಾಗುತ್ತದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಕಳೆದ 8 ವರ್ಷಗಳಿಂದ ಪ್ರೋತ್ಸಾಹಧನ ಪಾವತಿಯಾಗಿಲ್ಲ. ಹತ್ತಾರು ಸಮಸ್ಯೆಗಳಿವೆ. ನಮ್ಮ ವೇತನ ಹೆಚ್ಚಳ ಮಾಡುವುದಾಗಿ ಚುನಾವಣೆ ಪ್ರಚಾರ ವೇಳೆ ಆರನೇ ಗ್ಯಾರಂಟಿ ನೀಡಿದ್ದು, ಭಾಷಣದಲ್ಲೇ ಉಳಿದಿದೆ ಎಂದು ಆರೋಪಿಸಿದರು.
ಮಾಸಿಕ ಗೌರವಧನ 15 ಸಾವಿರ ರೂ.ಗೆ ಹೆಚ್ಚಿಸಿ. ಕುಂದು ಕೊರತೆ ಸಭೆ ಕರೆಯಿರಿ. ನಮ್ಮದಲ್ಲದ ಕೆಲಸಕ್ಕೆ ನಿಯೋಜಿಸಬಾರದು. ಜಿಲ್ಲಾಸ್ಪತ್ರೆಯಲ್ಲಿ ನಮಗಾಗಿ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿರ್ಮಿಸಿ. ಜಿಪಿಎಸ್ ೋಟೋ ಹಾಕುವ ಕಿರುಕುಳ ನಿಲ್ಲಿಸಿ. ಪ್ರತಿ ತಿಂಗಳು ರ್ನಿದಿಷ್ಟ ದಿನಾಂಕದಂದು ವೇತನ ಪಾವತಿ ಮಾಡಿ. ೈಲ್, ನೋಟ್ ಬುಕ್, ಝರಾಕ್ಸ್ ಹಾಗೂ ಇತರ ಸ್ಟೇಷನರಿ ವಸ್ತುಗಳ ಖರೀದಿಗೆ ಹಣ ಒದಗಿಸುವಂತೆ ಒತ್ತಾಯಿಸಿದರು.
ಸಂದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ಪದಾಧಿಕಾರಿಗಳಾದ ಶೋಭಾ ಹೂಗಾರ, ಶಂಕ್ರಮ್ಮ ಹಳ್ಳಿಕೇರಿ, ಶಿವಮ್ಮ, ಅನ್ನಪೂರ್ಣ, ವಿಜಯಲಕ್ಷಿ$್ಮ, ಲಾಲಬಿ, ಸುನಿತಾ, ಮಹಾದೇವಿ, ಶಭಾನ, ಅನ್ನಪೂರ್ಣ, ರೇಖಾ, ಭಾಗ್ಯಶ್ರೀ, ಅಮರಮ್ಮ, ಮಂಜುಳಾ, ರೇಣುಕಾ, ರಾಜೇಶ್ವರಿ ಇತರರಿದ್ದರು.