ಮಾಸಿಕ ಗೌರವಧನ ಹೆಚ್ಚಳ ಮಾಡಿ

district koppal asha workers protest
Published on

ಕೊಪ್ಪಳ: ಸಿಎಂ ಕೊಟ್ಟ ಭರವಸೆಯಂತೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ನಮ್ಮ ಬೇಡಿಕೆ ಈಡೇರಿಕೆಗೆ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ನಮ್ಮ ಹೋರಾಟ ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಅದರಂತೆ 2025ರ ಏಪ್ರೀಲ್ನಿಂದ ಅನ್ವಯ ಆಗುವಂತೆ 10 ಸಾವಿರ ರೂ. ಗೌರವಧನ ಹೆಚ್ಚಿಸಲಾಗುವುದು. ಜತೆಗೆ ಹೆಚ್ಚುವರಿ ಭತ್ಯೆ ನೀಡಬೇಕು. ಯಾರಿಗಾದರೂ ಕಡಿಮೆ ಭತ್ಯೆ ಬಂದಲ್ಲಿ, ಸರ್ಕಾರವೇ ಹೆಚ್ಚುವರಿ ಸೇರಿಸಿ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದೆವು ಎಂದರು.

ಆದರೆ, ಬಜೆಟ್ ಪೂರ್ವಭಾವಿಯಾಗಿ ನಮ್ಮೊಡನೆ ಸಭೆ ನಡೆಸಿಲ್ಲ. ಬಜೆಟ್ನಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ನಮ್ಮ ಸಂದೊಂದಿಗೆ ಚರ್ಚಿಸಿಲ್ಲ. ಆದೇಶವನ್ನೂ ಮಾಡಿಲ್ಲ. ಇದರಿಂದ ನಮಗೆಲ್ಲ ಆಘಾತವಾಗಿದೆ. ಬದಲಿಗೆ ಒಂದರ ಮೇಲೊಂದರಂತೆ ಕಾರ್ಯಕ್ರಮ ಬದಲಾವಣೆ ಮಾಡುತ್ತಿದ್ದಾರೆ. ಆಶಾ ಸುಗಮಕಾರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದು ಅನ್ಯಾಯದ ಕೆಲಸ. 60 ವರ್ಷ ಮೇಲ್ಪಟ್ಟ ಆಶಾಗಳ ನಿವೃತ್ತಿಗೆ ಆದೇಶಿರುವುದು ಸರಿಯಲ್ಲ. ಗೌರವಧನ ಹೆಚ್ಚಿಸುವ ಆದೇಶ ಮಾಡುವಂತೆ ಆಗ್ರಹಿಸಿದರು.

ಸಂದ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಕಾರ್ಯದರ್ಶಿ ಕೌಶಲ್ಯ ಗೌಡರ್, ಪ್ರಮುಖರಾದ ಶೋಭಾ ಹೂಗಾರ, ಸುನೀತಾ ಆಚಾರ್, ಶಂಕ್ರಮ್ಮ, ರಜಿಯಾ ಬೇಗಂ, ದಾಾಯಣಿ, ಶರಣಮ್ಮ, ಅನ್ನಪೂರ್ಣ, ಶಿವಮ್ಮ, ಸುಧಾ, ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net