ಕಳ್ಳ ಸಾಗಣೆ ತಡೆಗೆ ಸಹಕರಿಸಿ

district-koppal-anti-human-trafficking-railway-station
Published on

ಕೊಪ್ಪಳ: ಮಾನವ ಕಳ್ಳ ಸಾಗಣೆ ಅಪರಾಧ. ತಡೆಗೆ ಎಲ್ಲರ ಸಹಕಾರ ಅಗತ್ಯ ಎಂದು ಸ್ಪಂದನ ಸಂಸ್ಥೆ ಪ್ರತಿನಿಧಿ ಶಂಕರ್​ ಹೇಳಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ಪಂದನ ಸಂಸ್ಥೆ ಸಯೋಗದಲ್ಲಿ ಬುಧವಾರ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ, ಬಾಲ ಕಾರ್ಮಿಕರು, ಮಾನವ ಕಳ್ಳ ಸಾಗಣೆ ತಡೆಯಬೇಕು. ಸ್ವತಂತ್ರವಾಗಿ ಬದುಕುವ ಹಕ್ಕು ಎಲ್ಲರಿಗಿದೆ. ಅಪಹರಣ ನಿಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಪರಸ್ಪರ ಸಹಕಾರ ಅಗತ್ಯ. ಜನರು ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ. ಮಕ್ಕಳು, ಮಹಿಳೆಯರ ಅಪಹರಣ ಯತ್ನಗಳು ನಡೆದಲ್ಲಿ ಪೊಲೀಸ್​ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಿಷಯ ಮುಟ್ಟಿಸಿ ಎಂದು ಮನವಿ ಮಾಡಿದರು.

1098 ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಸಿಂಗನಾಳ ಮಾತನಾಡಿ, ಅಪಹರಣ ಯತ್ನ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ. ಮಾನವ ಕಳ್ಳ ಸಾಗಣೆ ಕ್ರಿಮಿನಲ್​ ಅಪರಾಧ. ಸಾರ್ವಜನಿಕರು ಜಾಗೃತರಾದಲ್ಲಿ ಇಂಥ ಟನೆಗಳನ್ನು ತಡೆಯಬಹುದು ಎಂದರು.

ರೈಲ್ವೆ ಎಎಸ್​ಐ ಉಮೇಶ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಸಿಬ್ಬಂದಿ ವಿಜಯಲಕ್ಷಿ$್ಮ, ಶಿವಲೀಲಾ, ಮಂಜುನಾಥ ಬಾಕಳೆ, ಎ.ಕೆ.ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net